ಲೇಹ್‌: ಲಡಾಖ್‌ನ ಲೇಹ್‌ ಬಳಿಯ ಟ್ಯಾಂಗ್ಸ್ಟೆ ಪರ್ವತ ಪ್ರದೇಶದಲ್ಲಿ ಸೇನೆಯ ಚೀತಾ ಹೆಲಿಕಾಪ್ಟರ್‌ ಪತನಗೊಂಡಿದೆ. ಈ ವೇಳೆ ಅದರಲ್ಲಿದ್ದ ಭಾರತೀಯ ಸೇನೆಯ ಮೂವರು ಅಧಿಕಾರಿಗಳು ಕೂದಲೆಳೆ ಅಂತರದಲ್ಲಿ ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ.

ಮೇ 20 ರಂದೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ‘ಇವರು ಬದುಕಿದ್ದು ಪವಾಡವೇ ಸರಿ’ ಎಂದಿದ್ದಾರೆ.

ನಿಯಮಿತ ಕಾರ್ಯಾಚರಣೆ ಸಂದರ್ಭದಲ್ಲಿ ಸಿಂಗಲ್‌ ಎಂಜಿನ್‌ ಹೊಂದಿರುವ ಎಚ್‌ಎಎಲ್‌ ಚೀತಾ ಲೈಟ್‌ ಹೆಲಿಕಾಪ್ಟರ್‌ ಸಂಚರಿಸುತ್ತಿದ್ದಾಗ ಪತನಗೊಂಡಿದೆ. ಈ ವೇಳೆ ಓರ್ವ ಲೆಫ್ಟಿನೆಂಟ್ ಕರ್ನಲ್ , ಓರ್ವ ಮೇಜರ್ ಪೈಲಟ್‌ ಮತ್ತು ಪದಾತಿದಳದ ಜನರಲ್‌ ಆಫೀಸರ್ ಕಮಾಂಡಿಂಗ್‌ ಅಧಿಕಾರಿಯಿದ್ದರು. ಮೂವರು ಕೂಡ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಇನ್ನು ವಿಮಾನ ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಸದ್ಯ ತನಿಖೆ ನಡೆಯುತ್ತಿದೆ.