ಅಮೆರಿಕ ಉತ್ಪನ್ನಗಳಿಗೆ ಚೀನಾ ಶೇ.15ರಷ್ಟು ತೆರಿಗೆ

| Published : Feb 05 2025, 12:31 AM IST

ಸಾರಾಂಶ

ಬೀಜಿಂಗ್‌: ತನ್ನ ದೇಶದ ಉತ್ಪನ್ನಗಳ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಿದ ಅಮೆರಿಕದ ಕ್ರಮಕ್ಕೆ ಇದೀಗ ಚೀನಾ ಪ್ರತಿಏಟು ನೀಡಲು ಮುಂದಾಗಿದೆ. ವಿಶ್ವದ ದೊಡ್ಡಣ್ಣನ ಜತೆಗೆ ನೇರವಾಗಿ ಮತ್ತೊಂದು ಬಾರಿ ತೆರಿಗೆ ಯುದ್ಧಕ್ಕೆ ಇಳಿದಿದೆ.

ಬೀಜಿಂಗ್‌: ತನ್ನ ದೇಶದ ಉತ್ಪನ್ನಗಳ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಿದ ಅಮೆರಿಕದ ಕ್ರಮಕ್ಕೆ ಇದೀಗ ಚೀನಾ ಪ್ರತಿಏಟು ನೀಡಲು ಮುಂದಾಗಿದೆ. ವಿಶ್ವದ ದೊಡ್ಡಣ್ಣನ ಜತೆಗೆ ನೇರವಾಗಿ ಮತ್ತೊಂದು ಬಾರಿ ತೆರಿಗೆ ಯುದ್ಧಕ್ಕೆ ಇಳಿದಿದೆ.ಅಮೆರಿಕದಿಂದ ಆಮದಾಗುವ ಕಲ್ಲಿದ್ದಲು ಮತ್ತು ಎಲ್‌ಎನ್‌ಜಿ ಉತ್ಪನ್ನಗಳಿಗೆ ಶೇ.15ರಷ್ಟು ಮತ್ತು ಕಚ್ಚಾತೈಲ, ಕೃಷಿ ಉಪಕರಣಗಳು ಹಾಗೂ ದೊಡ್ಡ ಗಾತ್ರದ ಎಂಜಿನ್‌ ಹೊಂದಿರುವ ಕಾರುಗಳ ಮೇಲೆ ಶೇ.10ರಷ್ಟು ತೆರಿಗೆಯನ್ನು ಚೀನಾ ವಿಧಿಸಿದೆ. ಜತೆಗೆ ಗೂಗಲ್‌ ವಿರುದ್ಧದ ಆ್ಯಂಟಿ ಟ್ರಸ್ಟ್‌(ನಂಬಿಕೆ ಉಲ್ಲಂಘನೆ) ಆರೋಪಕ್ಕೆ ಸಂಬಂಧಿಸಿ ತನಿಖೆಯನ್ನೂ ಆರಂಭಿಸಿದೆ.ಇದೇ ವೇಳೆ ಡಬ್ಲ್ಯುಟಿಒದ ವಿವಾದ ಇತ್ಯರ್ಥ ವ್ಯವಸ್ಥೆಯಡಿ ಅಮೆರಿಕದ ತೆರಿಗೆ ಕ್ರಮಗಳ ವಿರುದ್ಧ ಪ್ರಕರಣವನ್ನೂ ದಾಖಲಿಸುವುದಾಗಿ ಚೀನಾ ಹೇಳಿದೆ. ಅಮೆರಿಕದ ತೆರಿಗೆ ಕ್ರಮವು ದುರುದ್ದೇಶದಿಂದ ಕೂಡಿದೆ.

ಏಕಪಕ್ಷೀಯವಾಗಿ ಈ ರೀತಿ ತೆರಿಗೆ ಹೆಚ್ಚಿಸುವ ಕ್ರಮವು ವಿಶ್ವ ವ್ಯಾಪಾರ ಸಂಸ್ಥೆಯ ನಿಯಮಗಳ ಗಂಭೀರ ಉಲ್ಲಂಘನೆ. ಅಮೆರಿಕವು ತನ್ನದೇ ಆದ ಸಮಸ್ಯೆ ಎದುರಿಸುತ್ತಿದೆ. ಈ ರೀತಿಯ ತೆರಿಗೆ ಕ್ರಮಗಳಿಂದ ಆ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಉಪಯೋಗಕ್ಕೆ ಬರುವುದಿಲ್ಲ ಎಂದಿರುವ ಚೀನಾ, ಇದು ಎರಡೂ ದೇಶಗಳ ನಡುವಿನ ಆರ್ಥಿಕ ಮತ್ತು ವ್ಯಾಪಾರ ಸಹಭಾಗಿತ್ವವನ್ನು ಹಾಳು ಮಾಡಲಿದೆ ಎಂದು ತಿಳಿಸಿದೆ.