ಭಾರತ-ಚೀನಾ ನಡುವಿನ ವಿವಾದಿತ ಶಕ್ಸ್‌ಗಂ ಕಣಿವೆಯಲ್ಲಿ ಚೀನಾ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಭಾರತದ ಆಕ್ಷೇಪಿಸಿದರೂ, ‘ಶಕ್ಸ್‌ಗಂ ಕಣಿವೆ ನಮ್ಮದು. ನಮ್ಮದೇ ಆದ ಭೂಪ್ರದೇಶದಲ್ಲಿ ಮೂಲಸೌಕರ್ಯ ನಿರ್ಮಿಸುತ್ತಿದ್ದೇವೆ’ ಎಂದು ಚೀನಾ ಪುನರುಚ್ಚರಿಸಿದೆ.

ಬೀಜಿಂಗ್‌: ಭಾರತ-ಚೀನಾ ನಡುವಿನ ವಿವಾದಿತ ಶಕ್ಸ್‌ಗಂ ಕಣಿವೆಯಲ್ಲಿ ಚೀನಾ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಭಾರತದ ಆಕ್ಷೇಪಿಸಿದರೂ, ‘ಶಕ್ಸ್‌ಗಂ ಕಣಿವೆ ನಮ್ಮದು. ನಮ್ಮದೇ ಆದ ಭೂಪ್ರದೇಶದಲ್ಲಿ ಮೂಲಸೌಕರ್ಯ ನಿರ್ಮಿಸುತ್ತಿದ್ದೇವೆ’ ಎಂದು ಚೀನಾ ಪುನರುಚ್ಚರಿಸಿದೆ.

ವಿಭಜನೆ ನಂತರ ಪಿಒಕೆನಂತೆಯೇ ಶಕ್ಸ್‌ಗಂ ಕಣಿವೆ ಪಾಕ್‌ ಪಾಲಾಗಿತ್ತು

ವಿಭಜನೆ ನಂತರ ಪಿಒಕೆನಂತೆಯೇ ಶಕ್ಸ್‌ಗಂ ಕಣಿವೆ ಪಾಕ್‌ ಪಾಲಾಗಿತ್ತು. ಆದರೆ 1963ರ ಚೀನಾ-ಪಾಕಿಸ್ತಾನ ಗಡಿ ಒಪ್ಪಂದದ ಅನ್ವಯ, ಶಕ್ಸ್‌ಗಂ ಕಣಿವೆಯಲ್ಲಿನ 5180 ಕಿ.ಮೀ ಪ್ರದೇಶವನ್ನು ಪಾಕಿಸ್ತಾನವು ಅಕ್ರಮವಾಗಿ ಚೀನಾಗೆ ಬಿಟ್ಟು ಕೊಟ್ಟಿತ್ತು. ಇದನ್ನು ಭಾರತ ಇಂದಿಗೂ ಒಪ್ಪಿಕೊಂಡಿಲ್ಲ.

ಚೀನಾ ಅಲ್ಲಿ ಮೂಲ ಸೌಕರ್ಯ ನಿರ್ಮಾಣಕ್ಕೆ ಮುಂದಾಗಿದೆ

ಈ ನಡುವೆ ಚೀನಾ ಅಲ್ಲಿ ಮೂಲ ಸೌಕರ್ಯ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಭಾರತದ ವಿದೇಶಾಂಗ ವಕ್ತಾರ ರಣಧೀರ್‌ ಜೈಸ್ವಾಲ್‌ ಆಕ್ಷೇಪಿಸಿ, ‘ಶಕ್ಸ್‌ಗಂ ಕಣಿವೆ ಎಂದಿಗೂ ಭಾರತದ ಭಾಗ. ಚೀನಾ-ಪಾಕ್‌ ಗಡಿ ಒಪ್ಪಂದವನ್ನು ಎಂದಿಗೂ ನಾವು ಒಪ್ಪಿಲ್ಲ’ ಎಂದು ಕಳೆದ ವಾರ ಹೇಳಿದ್ದರು.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಇಲಾಖೆ ವಕ್ತಾರೆ ಮಾವೋ ನಿಂಗ್, ‘ಶಕ್ಸ್‌ಗಂ ಕಣಿವೆ ಚೀನಾದ್ದು. ನಾವು ನಮ್ಮ ದೇಶದ ಭೂಪ್ರದೇಶದಲ್ಲಿ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಹೊರಟ್ಟಿದ್ದೇವೆ’ ಎಂದು ಪುನರುಚ್ಚರಿಸಿದ್ದಾರೆ.