ಸಾರಾಂಶ
ಮೇ ತಿಂಗಳಲ್ಲಿ ನಡೆದ ಭಾರತದ ವಿರುದ್ಧದ ಸಮರದ (ಆಪರೇಷನ್ ಸಿಂದೂರ) ವೇಳೆ ಪಾಕಿಸ್ತಾನ ಚೀನಿ ನಿರ್ಮಿತ ಶಸ್ತ್ರಾಸ್ತ್ರ ಬಳಸಿತ್ತು. ಈ ಸಂದರ್ಭವನ್ನು ಚೀನಾ ತನ್ನ ಶಸ್ತ್ರಾಸ್ತ್ರ ಸಾಮರ್ಥ್ಯ ಹೇಗಿದೆ ಎಂಬುದನ್ನು ಪರೀಕ್ಷಾರ್ಥವಾಗಿ ಬಳಸಿಕೊಂಡಿತು ಎಂದು ಮಂಗಳವಾರ ಪ್ರಕಟವಾದ ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗದ ವರದಿ ಹೇಳಿದೆ.
ನವದೆಹಲಿ: ಮೇ ತಿಂಗಳಲ್ಲಿ ನಡೆದ ಭಾರತದ ವಿರುದ್ಧದ ಸಮರದ (ಆಪರೇಷನ್ ಸಿಂದೂರ) ವೇಳೆ ಪಾಕಿಸ್ತಾನ ಚೀನಿ ನಿರ್ಮಿತ ಶಸ್ತ್ರಾಸ್ತ್ರ ಬಳಸಿತ್ತು. ಈ ಸಂದರ್ಭವನ್ನು ಚೀನಾ ತನ್ನ ಶಸ್ತ್ರಾಸ್ತ್ರ ಸಾಮರ್ಥ್ಯ ಹೇಗಿದೆ ಎಂಬುದನ್ನು ಪರೀಕ್ಷಾರ್ಥವಾಗಿ ಬಳಸಿಕೊಂಡಿತು ಎಂದು ಮಂಗಳವಾರ ಪ್ರಕಟವಾದ ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗದ ವರದಿ ಹೇಳಿದೆ.
‘ಸಮರದಲ್ಲಿ ಮೊದಲ ಬಾರಿಗೆ ಚೀನಾದ ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳಾದ ಎಚ್‌ಕ್ಯು-9 ವಾಯು ರಕ್ಷಣಾ ವ್ಯವಸ್ಥೆ, ಪಿಎಲ್-15 ಕ್ಷಿಪಣಿಗಳು ಮತ್ತು ಜೆ-10 ಯುದ್ಧ ವಿಮಾನ ಬಳಸಲಾಯಿತು. ಇದನ್ನು ಚೀನಾ ತನ್ನ ಶಸ್ತ್ರ ಸಾಮರ್ಥ್ಯ ಪರಿಶೀಲಿಸಿತು’ ಎಂದು ವರದಿ ಹೇಳಿದೆ.ಇದೇ ವರದಿಯು, ‘ಭಾರತದ ಪಹಲ್ಗಾಂ ಮೇಲೆ ದಾಳಿ ಮಾಡಿದವರು ಪಾಕ್ ಉಗ್ರರಲ್ಲ’ ಎಂದು ಹೇಳಿ ಇತ್ತೀಚೆಗೆ ಆಕ್ರೋಶಕ್ಕೆ ಕಾರಣವಾಗಿತ್ತು.
;Resize=(128,128))
;Resize=(128,128))
;Resize=(128,128))
;Resize=(128,128))