ಸಾರಾಂಶ
ವಿಶ್ವದ ಯಾವುದೇ ರಾಡಾರ್ ವ್ಯವಸ್ಥೆಗೆ ಮಂಕು ಬೂದಿ ಎರಚುವ ಅತ್ಯಾಧುನಿಕ, 6ಜಿ ಆಧರಿತ ವಿಶ್ವದ ಮೊದಲ ಎಲೆಕ್ಟ್ರಾನಿಕ್ ಯುದ್ಧಾಸ್ತ್ರವನ್ನು ಚೀನಾದ ವಿಜ್ಞಾನಿಗಳು ಅನಾವರಣಗೊಳಿಸಿದ್ದಾರೆ.
ಬೀಜಿಂಗ್: ವಿಶ್ವದ ಯಾವುದೇ ರಾಡಾರ್ ವ್ಯವಸ್ಥೆಗೆ ಮಂಕು ಬೂದಿ ಎರಚುವ ಅತ್ಯಾಧುನಿಕ, 6ಜಿ ಆಧರಿತ ವಿಶ್ವದ ಮೊದಲ ಎಲೆಕ್ಟ್ರಾನಿಕ್ ಯುದ್ಧಾಸ್ತ್ರವನ್ನು ಚೀನಾದ ವಿಜ್ಞಾನಿಗಳು ಅನಾವರಣಗೊಳಿಸಿದ್ದಾರೆ. ಇದರಲ್ಲಿರುವ ಹೊಸ ತಲೆಮಾರಿನ ಈ ಸಿಗ್ನಲ್ ನಿರ್ವಹಣೆ ವ್ಯವಸ್ಥೆಯು ವಿಶ್ವದ ಯಾವುದೇ ದೇಶದ ರಾಡಾರ್ ವ್ಯವಸ್ಥೆಗೆ ಸವಾಲೊಡ್ಡಬಲ್ಲದು ಎಂದು ಇದರ ನಿರ್ಮಾತೃಗಳು ಹೇಳಿದ್ದಾರೆ.
ಈ ವ್ಯವಸ್ಥೆಯು ಅತ್ಯಾಧುನಿಕ ವೇಗದ ಸ್ಪೆಕ್ಟ್ರಂ ಬಳಸುವ ಕಾರಣ ಶತ್ರು ದೇಶದ ಸಂದೇಶಗಳನ್ನು ತ್ವರಿತವಾಗಿ ಗ್ರಹಿಸಲು ಸಾಧ್ಯ. ಇದಕ್ಕೆ ಅನುಗುಣವಾಗಿ ಏಕಕಾಲಕ್ಕೆ 3600ಕ್ಕೂ ಹೆಚ್ಚು ಸುಳ್ಳು ಗುರಿಗಳನ್ನು ಸೃಷ್ಟಿಸಿ ಎದುರಾಳಿ ದೇಶದ ವಿಮಾನಗಳ ಪೈಲಟ್‌ಗಳನ್ನು ಇದು ದಿಕ್ಕುತಪ್ಪಿಸಬಲ್ಲದಾಗಿದೆ. ಇದರಿಂದಾಗಿ ಶತ್ರು ದೇಶದ ವಿಮಾನ ಪೈಲಟ್‌ಗೆ ಎಲ್ಲಿ ದಾಳಿ ನಡೆಸಬೇಕೆಂಬ ಅನುಮಾನ ಸೃಷ್ಟಿಯಾಗುತ್ತದೆ.
ಇನ್ನು ಭೂಮಿಯ ಮೇಲೆ ಇದು ಜಾಮರ್ ರೀತಿಯಲ್ಲೂ ಕಾರ್ಯನಿರ್ವಹಿಸಬಲ್ಲದು.
ಎಲೆಕ್ಟ್ರಾನಿಕ್ ಯುದ್ಧಾಸ್ತ್ರ ಜಗತ್ತಿನ ಬಹುತೇಕ ದೇಶಕ್ಕೆ ಸವಾಲ್
ಶತ್ರು ರಾಡಾರ್‌ಗೆ ಮಂಕು ಬೂದಿ ಎರಚುವ ಸಾಮರ್ಥ್ಯ ಇದಕ್ಕಿದೆ