ಸಾರಾಂಶ
ಬಿಹಾರದಲ್ಲಿ ಎನ್‌ಡಿಎ ತನ್ನ ಸೀಟು ಹಂಚಿಕೆ ಅಂತಿಮಗೊಳಿಸಿದೆ. ರಾಜ್ಯದ 40 ಲೋಕಸಭಾ ಸೀಟುಗಳಲ್ಲಿ ಬಿಜೆಪಿ 17, ಜೆಡಿಯು 16, ಎಲ್‌ಜೆಪಿ (ರಾಮ್ ವಿಲಾಸ್) 4, ಉಪೇಂದ್ರ ಕುಶ್ವಾಹಾ ಮತ್ತು ಜಿತೇನ್ ರಾಮ್ ಮಾಂಝಿ ಅವರ ಪಕ್ಷಗಳು ತಲಾ 1 ಸ್ಥಾನ ಪಡೆದಿವೆ.
ಪಟನಾ: ಬಿಹಾರದಲ್ಲಿ ಎನ್‌ಡಿಎ ತನ್ನ ಸೀಟು ಹಂಚಿಕೆ ಅಂತಿಮಗೊಳಿಸಿದೆ. ರಾಜ್ಯದ 40 ಲೋಕಸಭಾ ಸೀಟುಗಳಲ್ಲಿ ಬಿಜೆಪಿ 17, ಜೆಡಿಯು 16, ಎಲ್‌ಜೆಪಿ (ರಾಮ್ ವಿಲಾಸ್) 4, ಉಪೇಂದ್ರ ಕುಶ್ವಾಹಾ ಮತ್ತು ಜಿತೇನ್ ರಾಮ್ ಮಾಂಝಿ ಅವರ ಪಕ್ಷಗಳು ತಲಾ 1 ಸ್ಥಾನ ಪಡೆದಿವೆ.
ಬಿಜೆಪಿ ಕಳೆದ ಬಾರಿಯಂತೆ ಈ ಸಲವೂ 17, ಜೆಡಿಯು 2019 ರಲ್ಲಿ ಸ್ಪರ್ಧಿಸಿದ್ದಕ್ಕಿಂತ ಒಂದು ಕಡಿಮೆ, ಹಿಂದಿನ 6ರ ಬದಲು ಎಲ್‌ಜೆಪಿ 5 ಸ್ಥಾನ ಪಡೆದಿವೆ.ಹಾಜಿಪುರದಿಂದ ಎಲ್‌ಜೆಪಿ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಸ್ಪರ್ಧಿಸಲಿದ್ದಾರೆ. ಎಲ್‌ಜೆಪಿ ಇನ್ನೊಂದು ಬಣದ ನಾಯಕ ಪಶುಪತಿ ಪಾರಸ್‌ಗೆ ಯಾವುದೇ ಸೀಟು ಹಂಚಿಕೆ ಆಗಿಲ್ಲ. ಅವರೊಂದಿಗೆ ಮಾತುಕತೆ ನಡೆದಿದೆ ಎಂದು ಬಿಜೆಪಿ ಹೇಳಿದೆ.