ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶೋಕ್ ರಾಂಕಾ ಬಿಡುಗಡೆಯಾಗಿ ಬಂದ ನಂತರ ಮುಂದಿನ ಪ್ರತಿಭಟನೆಯ ಕುರಿತು ಮರು ರಣತಂತ್ರವನ್ನು ರೂಪಿಸುತ್ತೇವೆ ಎಂದು ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಭಾನುವಾರ ತಿಳಿಸಿದ್ದಾರೆ.
-ಸುದೀರ್ಘ ಹೋರಾಟಕ್ಕೆ ಸಿದ್ಧ: ಸಿಜೆಪಿ ಸ್ಥಾಪಕ
-ಎಷ್ಟೇ ಬೆದರಿಕೆ ಹಾಕಿದರೂ ಹಿಂದೆ ಸರಿಯಲ್ಲನವದೆಹಲಿ: ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶೋಕ್ ರಾಂಕಾ ಬಿಡುಗಡೆಯಾಗಿ ಬಂದ ನಂತರ ಮುಂದಿನ ಪ್ರತಿಭಟನೆಯ ಕುರಿತು ಮರು ರಣತಂತ್ರವನ್ನು ರೂಪಿಸುತ್ತೇವೆ ಎಂದು ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಭಾನುವಾರ ತಿಳಿಸಿದ್ದಾರೆ.ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸೌರವ್ ಮತ್ತು ಆಶು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ. ಅವರು ಬಿಡುಗಡೆಯಾಗಿ ಬಂದನಂತರ ನಮ್ಮ ಮುಂದಿನ ಹೆಜ್ಜೆಗಳ ಬಗ್ಗೆ ನಿರ್ಧರಿಸಲು ಸಭೆ ಸೇರಿ ಹೊಸ ರಣತಂತ್ರ ರೂಪಿಸುತ್ತೇವೆ. ನಮಗೆ ಎಷ್ಟೇ ಬೆದರಿಕೆ ಹಾಕಿದರೂ ಹಿಂದೆ ಸರಿಯುವುದಿಲ್ಲ. ಇದು ಸುದೀರ್ಘ ಹೋರಾಟವಾಗಿದ್ದು, ಇದಕ್ಕೆ ಸಂಪೂರ್ಣವಾಗಿ ಸಿದ್ಧರಿದ್ದೇವೆ’ ಎಂದು ಸ್ಪಷ್ಟಪಡಿಸಿದರು. ಇತ್ತೀಚೆಗಷ್ಟೇ ದೀಪ್ಕೆಯನ್ನು ಬಂಧಿಸಿ, 1 ವರ್ಷ ಕಾಲ ಶಾಂತಿ ಕದಡದಂತೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ.
==ದಾಸ್, ರಾಂಕಾ ಸಲ್ಲಿಸಿದ್ದ 4 ಜಾಮೀನು ಶ್ಯೂರಿಟಿ ತಿರಸ್ಕಾರ
ನವದೆಹಲಿ: ನ್ಯಾಯಾಂಗ ಬಂಧನದಲ್ಲಿರುವ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರು ಜಾಮೀನಿಗಾಗಿ ಸಲ್ಲಿಸಿದ್ದ 4 ಶ್ಯೂರಿಟಿಗಳನ್ನು (ಖಾತ್ರಿ) ಅಸ್ಪಷ್ಟ ಕಾರಣ ನೀಡಿ ತಿರಸ್ಕರಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ರತ್ನಾ ಸಿಂಗ್ ತಿಳಿಸಿದ್ದಾರೆ.ನಿಷೇಧಿತ ಜಂತರ್ ಮಂತರ್ ಪ್ರವೇಶಿಸಿದ ಆರೋಪದ ಮೇಲೆ ಅ.14ರಂದು ದಾಸ್ ಮತ್ತು ರಾಂಕಾರನ್ನು 5 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.