ಭಾರತದ ದಾಳಿಗೆ ಚಿಂದಿಯಾದ ಪಾಕ್‌ ವಾಯುನೆಲೆ, ರನ್‌ವೇ

| Published : May 13 2025, 11:52 PM IST

ಭಾರತದ ದಾಳಿಗೆ ಚಿಂದಿಯಾದ ಪಾಕ್‌ ವಾಯುನೆಲೆ, ರನ್‌ವೇ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ನಡೆಸಿದ ಕ್ಷಿಪಣಿ ದಾಳಿಯಿಂದ ಪಾಕಿಸ್ತಾನದ ರನ್‌ ವೇ, ವಾಯುನೆಲೆಗಳು ಹೇಗೆ ಚಿಂದಿಯಾಗಿವೆ ಎನ್ನುವುದಕ್ಕೆ ಇದೀಗ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಅಮೆರಿಕದ ಮ್ಯಾಕ್ಸರ್‌ ಕಂಪನಿ ಭಾರತದ ದಾಳಿಗೆ ಧ್ವಂಸವಾದ ಪಾಕ್ ರನ್‌ವೇ , ಕಟ್ಟಡಗಳ ಹೈರೆಸುಲ್ಯೂಷನ್ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಪಾಕ್‌ ವಾಯುನೆಲೆ, ತಂಗುದಾಣ, ರನ್‌ವೇ ಧ್ವಂಸ ಫೋಟೋ

ಮ್ಯಾಕ್ಸರ್‌ ಕಂಪನಿಯಿಂದ ಹೈರೆಸುಲ್ಯೂಷನ್ ಚಿತ್ರ ಬಿಡುಗಡೆ

==

ನವದೆಹಲಿ: ಭಾರತ ನಡೆಸಿದ ಕ್ಷಿಪಣಿ ದಾಳಿಯಿಂದ ಪಾಕಿಸ್ತಾನದ ರನ್‌ ವೇ, ವಾಯುನೆಲೆಗಳು ಹೇಗೆ ಚಿಂದಿಯಾಗಿವೆ ಎನ್ನುವುದಕ್ಕೆ ಇದೀಗ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಅಮೆರಿಕದ ಮ್ಯಾಕ್ಸರ್‌ ಕಂಪನಿ ಭಾರತದ ದಾಳಿಗೆ ಧ್ವಂಸವಾದ ಪಾಕ್ ರನ್‌ವೇ , ಕಟ್ಟಡಗಳ ಹೈರೆಸುಲ್ಯೂಷನ್ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಕಳೆದ ವಾರ ಆಪರೇಷನ್ ಸಿಂದೂರ ಪ್ರತಿಕಾಗೋಷ್ಠಿಯ ಸಂದರ್ಭದಲ್ಲಿ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಮಿಲಿಟರಿ ಪಡೆಗಳ ಮೇಲೆ ನಿಖರವಾದ ದಾಳಿ ನಡೆಸಿವೆ ಎಂದು ಖಚಿತಪಡಿಸಿದ್ದರು. ಮಾತ್ರವಲ್ಲದೇ ಸೇನೆಯು ಇದಕ್ಕೆ ಸಂಬಂಧಿಸಿದ ಹಲವು ಚಿತ್ರಗಳನ್ನು ಬಿಡುಗಡೆ ಮಾಡಿತ್ತು.

ಇದೀಗ ಅಮೆರಿಕದ ಏರೋಸ್ಪೇಸ್‌ ಸಂಸ್ಥೆ ಮ್ಯಾಕ್ಸರ್ ಟೆಕ್ನಾಲಜೀಸ್ ಉಪಗ್ರಹದಲ್ಲಿ ಸೆರೆಹಿಡಿದ ಹೈರೆಸಲ್ಯೂಷನ್ ಚಿತ್ರ ಬಿಡುಗಡೆ ಮಾಡಿದ್ದು ಪಾಕಿಸ್ತಾನದ ಸೇನಾ ನೆಲೆಗಳು ಹೇಗೆ ಚಿಂದಿಯಾಗಿವೆ ಎಂಬುದು ಸೆರೆಯಾಗಿದೆ. ಇದರಲ್ಲಿ ರಾವಲ್ಪಿಂಡಿಯ ನೂರ್‌ ಖಾನ್ ವಾಯುನೆಲೆ, ಸುಕ್ಕೂರಿನಲ್ಲಿ ಒಂದು ಕಟ್ಟಡ, ಜಕೋಬಾಬಾದ್ ವಾಯುನೆಲೆಯ ಹ್ಯಾಂಗರ್‌ ನಾಶವಾಗಿರುವುದು, ಸಗೋರ್ಧಾದ ಮುಷಾಫ್ ವಾಯುನೆಲೆಯ ರನ್‌ ವೇ ಮತ್ತು ರಹೀಮ್ ಯಾರ್‌ ಖಾನ್ ವಾಯುನೆಲೆ ರನ್‌ವೇ ಹೇಗೆ ಧ್ವಂಸವಾಗಿದೆ ಎಂಬ ಚಿತ್ರಗಳಿವೆ.