ಸಾರಾಂಶ
ಇಡೀ ದೇಶವು ಪಾಕ್ ಉಗ್ರರ ವಿರುದ್ಧದ ಭಾರತದ ಆಪರೇಷನ್ ಸಿಂದೂರ ಮತ್ತು ಆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಶ್ಲಾಘಿಸಿ ಸಂಭ್ರಮಿಸುತ್ತಿದ್ದರೆ, ಮಧ್ಯಪ್ರದೇಶದ ಸಚಿವರೊಬ್ಬರು ಖುರೇಷಿಯವರನ್ನು ‘ಪಾಕ್ ಉಗ್ರರ ಸಹೋದರಿ’ ಎಂದು ಕರೆದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಭೋಪಾಲ್: ಇಡೀ ದೇಶವು ಪಾಕ್ ಉಗ್ರರ ವಿರುದ್ಧದ ಭಾರತದ ಆಪರೇಷನ್ ಸಿಂದೂರ ಮತ್ತು ಆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಶ್ಲಾಘಿಸಿ ಸಂಭ್ರಮಿಸುತ್ತಿದ್ದರೆ, ಮಧ್ಯಪ್ರದೇಶದ ಸಚಿವರೊಬ್ಬರು ಖುರೇಷಿಯವರನ್ನು ‘ಪಾಕ್ ಉಗ್ರರ ಸಹೋದರಿ’ ಎಂದು ಕರೆದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ಯದ ಬುಡಕಟ್ಟು ಸಚಿವ ಕುನ್ವರ್ ವಿಜಯ್ ಶಾ, ‘ನಮ್ಮ ದೇಶದ ಪುತ್ರಿಯರ ಸಿಂದೂರವನ್ನು ಅಳಿಸಿದ ಪಾಕಿಸ್ತಾನದ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನೇ ಪ್ರಧಾನಿ ಮೋದಿಯವರು ಕಳಿಸಿದರು’ ಎಂದು ಹೇಳಿದ್ದಾರೆ.
ಇದಕ್ಕೆ ಕಾಂಗ್ರೆಸ್ ಕಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಶಾ ಅವರನ್ನು ಕೂಡಲೇ ಹುದ್ದೆಯಿಂದ ತೆಗೆದುಹಾಕುವಂತೆ ಬಿಜೆಪಿಯನ್ನು ಆಗ್ರಹಿಸಿದ್ದಾರೆ. ರಾಜ್ಯ ಬಿಜೆಪಿ ಕೂಡ ಅವರಿಗೆ ಸಮನ್ಸ್ ಜಾರಿ ಮಾಡಿದೆ.ಶಾ ಅವರು ಸೇನಾ ಪರಿವಾರಕ್ಕೆ ಸೇರಿದವರು ಎಂಬುದು ದುರಂತವೇ ಸರಿ.