ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಮಿಮಿಕ್ರಿ ಮೂಲಕ ದೇಶವ್ಯಾಪಿ ಪ್ರಖ್ಯಾತರಾಗಿದ್ದ ಕಲಾವಿದ ಶ್ಯಾಂ ರಂಗೀಲಾ, ಈ ಬಾರಿ ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಿಮಿಕ್ರಿ ಮೂಲಕ ದೇಶವ್ಯಾಪಿ ಪ್ರಖ್ಯಾತರಾಗಿದ್ದ ಕಲಾವಿದ ಶ್ಯಾಂ ರಂಗೀಲಾ, ಈ ಬಾರಿ ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಶ್ಯಾಂ, ‘ ಇಂದಿನ ರಾಜಕಾರಣವೂ ಸಹ ಹಾಸ್ಯಮಯವಾಗಿರುವುದೇ ನನ್ನ ಈ ನಿರ್ಧಾರಕ್ಕೆ ಕಾರಣ. ಸೂರತ್ ಮತ್ತು ಇಂದೋರ್‌ನಲ್ಲಿ ನಡೆದ ರಾಜಕೀಯ ಪ್ರಹಸನದಿಂದಾಗಿ ಜನರಿಗೆ ಆಯ್ಕೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ವಾರಾಣಸಿ ಜನರಿಗೆ ಆಯ್ಕೆ ನೀಡುವ ಸಲುವಾಗಿ ಪ್ರಧಾನಿಯ ವಿರುದ್ಧ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ’ ಎಂದು ತಿಳಿಸಿದ್ದಾರೆ.