ಭಾರತದ ವಿರುದ್ಧ ಸಿಡಿದಿದ್ದ ಕೆನಡಾ ಪ್ರಧಾನಿ ಥಂಡಾ

| Published : Jun 17 2024, 01:41 AM IST / Updated: Jun 17 2024, 05:02 AM IST

ಸಾರಾಂಶ

ಕೆಲವೊಂದು ಮಹತ್ವದ ವಿಷಯಗಳಿಗೆ ಸಂಬಂಧಿಸಿದಂತೆ ಭಾರತದ ಜೊತೆಗೂಡಿ ಕಾರ್ಯನಿರ್ವಹಿಸಲು ಬದ್ಧ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ‘ತಣ್ಣನೆಯ’ ಹೇಳಿದ್ದಾರೆ.

ಬಾರಿ (ಇಟಲಿ): ಕೆಲವೊಂದು ಮಹತ್ವದ ವಿಷಯಗಳಿಗೆ ಸಂಬಂಧಿಸಿದಂತೆ ಭಾರತದ ಜೊತೆಗೂಡಿ ಕಾರ್ಯನಿರ್ವಹಿಸಲು ಬದ್ಧ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ‘ತಣ್ಣನೆಯ’ ಹೇಳಿದ್ದಾರೆ. 

ಭಾರತದ ವಿರುದ್ಧ ಸದಾ ಕಿಡಿಕಾರುವ, ಖಲಿಸ್ತಾನಿ ಉಗ್ರರಿಗೆ ನೇರವಾಗಿ ಬೆಂಬಲ ನೀಡುವ ಟ್ರುಡೋ ಅವರ ಈ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.ಇಟಲಿಯಲ್ಲಿ ನಡೆದೆ 7 ಶೃಂಗದ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತುಕತೆ ನಡೆಸಿದ್ದ ಟ್ರುಡೋ, ಶೃಂಗದ ಅಂತಿಮ ದಿನ ಸುದ್ದಗಾರರೊಂದಿಗೆ ಮಾತನಾಡಿದರು.

 ಈ ವೇಳೆ, ‘ಅತ್ಯಂತ ಮಹತ್ವದ ವಿಷಯಗಳಲ್ಲಿ ಭಾರತದ ಜೊತೆಗೂಡಿ ಕಾರ್ಯನಿರ್ವಹಿಸಲು ನಾವು ಬದ್ಧ. ಆ ಮಹತ್ವದ ಮತ್ತು ಸೂಕ್ಷ್ಮ ವಿಷಯಗಳು ಯಾವುವು ಎಂದು ನಾನು ಬಹಿರಂಗಪಡಿಸಲು ಹೋಗುವುದಿಲ್ಲ. 

ಈ ವಿಷಯದಲ್ಲಿ ನಾವು ಮಾತುಕತೆ ಮುಂದುವರೆಸಬೇಕಿದೆ. ಆದರೆ ಇದು, ಈ ವಿಷಯಗಳಲ್ಲಿ ನಾವು ಒಂದಾಗಿ ಕಾರ್ಯನಿರ್ವಹಿಸುವ ವಿಷಯದಲ್ಲಿ ವ್ಯಕ್ತಪಡಿಸುವ ಬದ್ಧತೆ ಇದು’ ಎಂದರು.ಟ್ರುಡೋ, ಸೂಕ್ಷ್ಮ ಮತ್ತು ಮಹತ್ವದ ವಿಷಯ ಯಾವುದು ಎಂದು ಬಹಿರಂಗಪಡಿಸದೇ ಇದ್ದರೂ, ಅದು ಭಾರತ ಮತ್ತು ಕೆನಡಾ ಸಂಬಂಧ ಹಾಳಾಗಲು ಕಾರಣವಾಗಿರುವ ಖಲಿಸ್ತಾನಿ ಉಗ್ರರ ಕುರಿತಾದ ವಿಷಯ ಇರಬಹುದು ಎಂದು ವಿಶ್ಲೇಷಿಸಲಾಗಿದೆ.