ರಾಬರ್ಟ್‌ ಪ್ರೆವೋಸ್ಟ್‌ ಹೊಸ ಪೋಪ್‌ ಆಗಿ ಆಯ್ಕೆ

| N/A | Published : May 09 2025, 12:35 AM IST / Updated: May 09 2025, 03:25 AM IST

ರಾಬರ್ಟ್‌ ಪ್ರೆವೋಸ್ಟ್‌ ಹೊಸ ಪೋಪ್‌ ಆಗಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೈಸ್ತರ ಧರ್ಮೀಯರ ಪರಮೋಚ್ಚ ಗುರು ಪೋಪ್‌ ಫ್ರಾನ್ಸಿಸ್‌ ಅವರ ನಿಧನದಿಂದ ತೆರವಾಗಿದ್ದ ಪೋಪ್‌ ಪಟ್ಟಕ್ಕೆ ಅಮೆರಿಕದ ರಾಬರ್ಟ್‌ ಪ್ರೆವೋಸ್ಟ್‌ ಆಯ್ಕೆಯಾಗಿದ್ದಾರೆ.

ವ್ಯಾಟಿಕನ್‌: ಕ್ರೈಸ್ತರ ಧರ್ಮೀಯರ ಪರಮೋಚ್ಚ ಗುರು ಪೋಪ್‌ ಫ್ರಾನ್ಸಿಸ್‌ ಅವರ ನಿಧನದಿಂದ ತೆರವಾಗಿದ್ದ ಪೋಪ್‌ ಪಟ್ಟಕ್ಕೆ ಅಮೆರಿಕದ ರಾಬರ್ಟ್‌ ಪ್ರೆವೋಸ್ಟ್‌ ಆಯ್ಕೆಯಾಗಿದ್ದಾರೆ. ಇವರು ಪೋಪ್‌ ಪಟ್ಟಕ್ಕೆ ಆಯ್ಕೆಯಾದ ಮೊದಲ ಅಮೆರಿಕನ್ನಾಗಿದ್ದು, ಇವರ ಪೋಪ್‌ ಪಟ್ಟದ ಹೆಸರು, 14ನೇ ಪೋಪ್‌ ಲಿಯೋ ಆಗಿದೆ. ಗುರುವಾರ ನಡೆದ 3ನೇ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ ಚಿಮಣಿಯಿಂದ ಬಿಳಿ ಹೊಗೆ ಕಾಣಿಸಿಕೊಂಡಿದೆ. ಅದರ ಬೆನ್ನಲ್ಲೇ ವ್ಯಾಟಿಕನ್‌ನ ಉನ್ನತ ಕಾರ್ಡಿನಲ್‌ ಇವರ ಹೆಸರನ್ನು ಘೋಷಣೆ ಮಾಡಿದ್ದಾರೆ.

ಬುಧವಾರ ಆರಂಭವಾದ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲ ಸುತ್ತಿನಲ್ಲಿ ಸಿಸ್ಟಿನಾ ಚಾಪೆಲ್‌ನ ಚಿಮಣಿಯಿಂದ ಕಪ್ಪುಹೊಗೆ ಕಾಣಿಸಿಕೊಂಡು ಇನ್ನು ಆಯ್ಕೆಯಾಗಿಲ್ಲ ಎಂಬ ಸಂದೇಶ ರವಾನೆಯಾಗಿತ್ತು. ಇದಾದ ಬಳಿಕ ಗುರುವಾರ ಮತ್ತ ನಡೆದ 2ನೇ ಸುತ್ತಿನ ಪ್ರಕ್ರಿಯೆಯಲ್ಲಿಯೂ ಸಹ ಯಾವುದೇ ಆಯ್ಕೆಯಾಗಿರಲಿಲ್ಲ. ಆದರೆ 3ನೇ ಸುತ್ತಿನಲ್ಲಿ ನೂತನ ಪೋಪ್‌ ಆಯ್ಕೆಯಾಗಿದ್ದಾರೆ. 

ಇದರ ಸಂದೇಶವಾಗಿ ಸಿಸ್ಟಿನಾ ಚಾಪೆಲ್‌ ಚಿಮಣಿಯಿಂದ ಬಿಳಿ ಹೊಗೆ ಕಾಣಿಸಿಕೊಂಡಿತು. ಈ ಮೂಲಕ ಹೊಸ ಪೋಪ್‌ 133 ಕಾರ್ಡಿನಲ್‌ನಲ್ಲಿ ಕನಿಷ್ಠ 89 ಮತಗಳನ್ನು ಪಡೆದುಕೊಂಡಿದ್ದಾರೆ ಎಂಬ ಸುದ್ದಿ ವ್ಯಾಟಿಕನ್‌ನಿಂದ ಹೊರಬಂದಿತು.ಈ ವೇಳೆ ವ್ಯಾಟಿಕನ್‌ನಲ್ಲಿ ನೆರೆದಿದ್ದ ಸಾವಿರಾರು ಜನ ಭಕ್ತರು ಸಂತೋಷ ಹೊರಹಾಕಿ, ‘ವಿವಾ ಲಿ ಪಾಪಾ’ ಎಂಬ ಘೋಷಣೆ ಕೂಗಿ, ವ್ಯಾಟಿಕನ್‌ ಸಿಟಿಯ ಬಾವುಟ ಹಾರಿಸಿ ಹರ್ಷ ವ್ಯಕ್ತಪಡಿಸಿದರು.

ರಾಬರ್ಟ್‌ ಅವರು 2000 ವರ್ಷ ಇತಿಹಾಸ ಹೊಂದಿರುವ ವ್ಯಾಟಿಕನ್‌ ಮತ್ತು ಕ್ಯಾಥೋಲಿಕ್‌ ಕ್ರೈಸ್ತ ಪಂಗಡವನ್ನು ಮುನ್ನಡೆಸಲಿದ್ದಾರೆ. ಇವರ ಹಿಂದಿನ ಪೋಪ್‌ ಆಗಿದ್ದ ಫ್ರಾನ್ಸಿಸ್‌ ಅವರು 12 ವರ್ಷಗಳ ಕಾಲ ಪೋಪ್‌ ಆಗಿ ಸೇವೆ ಸಲ್ಲಿಸಿದ್ದರು. ಫ್ರಾನ್ಸಿಸ್‌ ಅವಧಿಯಲ್ಲಿ ವ್ಯಾಟಿಕನ್‌ನಲ್ಲಿ ಹಲವಾರು ಪರಿಣಾಮಕಾರಿಯಾದ ಬದಲಾವಣೆಗಳಾಗಿದ್ದವು. 

267ನೇ ಪೋಪ್‌ ಆಗಿ ರಾಬರ್ಟ್‌ ಪ್ರೆವೋಸ್ಕ್‌ ಅಧಿಕಾರ:

ರಾಬರ್ಟ್‌ ಪೋಪ್‌ ಅವರು ವ್ಯಾಟಿಕನ್‌ನ 267ನೇ ಪೋಪ್‌ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 266ನೇ ಪೋಪ್‌ ಆಗಿದ್ದ ಫ್ರಾನ್ಸಿಸ್‌ ಅವರು ಫೆ.14ರಿಂದ ಅನಾರೋಗ್ಯಕ್ಕೆ ತುತ್ತಾಗಿ ಏ.21ರಂದು ಸಾವನ್ನಪ್ಪಿದ್ದರು.