ಸಾರಾಂಶ
‘ಕಾಂಗ್ರೆಸ್‌ನವರು ರೈತರ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರೆ. ಆದರೆ ಅವರು ರೈತರಿಗಾಗಿ ಏನೂ ಮಾಡಿಲ್ಲ. ಅಲ್ಲದೇ ಇತರರು ಮಾಡುವುದಕ್ಕೂ ಬಿಟ್ಟಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಜೈಪುರ: ‘ಕಾಂಗ್ರೆಸ್‌ನವರು ರೈತರ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರೆ. ಆದರೆ ಅವರು ರೈತರಿಗಾಗಿ ಏನೂ ಮಾಡಿಲ್ಲ. ಅಲ್ಲದೇ ಇತರರು ಮಾಡುವುದಕ್ಕೂ ಬಿಟ್ಟಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜಸ್ಥಾನ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಈ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು ‘ಕಾಂಗ್ರೆಸ್ ಪಕ್ಷ ರಾಜ್ಯಗಳ ನಡುವೆ ನೀರು ಹಂಚಿಕೆ ಬಿಕ್ಕಟ್ಟನ್ನು ಪರಿಹರಿಸುವ ಬದಲು, ಆ ವಿವಾದಗಳಿಗೆ ಬೆಂಬಲ ನೀಡಿದ್ದೇ ಜಾಸ್ತಿ. ಬಿಜೆಪಿ ನೀತಿಯು ಮಾತುಕತೆಯೇ ಹೊರತು ಸಂಘರ್ಷವಲ್ಲ. ನಾವು ಸಹಕಾರವನ್ನು ನಂಬುತ್ತೇವೆ. ವಿರೋಧವಲ್ಲ. ನಾವು ಪರಿಹಾರಗಳನ್ನು ನಂಬುತ್ತೇವೆ. ಅದಕ್ಕೆ ಅಡ್ಡಿಪಡಿಸುವುದಿಲ್ಲ’ ಎಂದರು.