ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ತನ್ನ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ.

ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ತನ್ನ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಒಟ್ಟು 56 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಇದರೊಂದಿಗೆ ಈವರೆಗೆ ಪಕ್ಷ ಒಟ್ಟಾರೆ 138 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದಂತೆ ಆಗಿದೆ.

3ನೇ ಪಟ್ಟಿಯಲ್ಲಿ ಅರುಣಾಚಲದ 2, ಗುಜರಾತ್‌ನ 11, ಕರ್ನಾಟಕದ 17, ಮಹಾರಾ಼ಷ್ಟ್ರದ 7, ರಾಜಸ್ಥಾನದ 7, ತೆಲಂಗಾಣದ 5, ಪಶ್ಚಿಮ ಬಂಗಾಳದ 8, ಪುದುಚೇರಿಯ 1 ಸ್ಥಾನಗಳು ಸೇರಿವೆ.

ಈ ಪಟ್ಟಿಯಲ್ಲಿ ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿಗೆ ಬಂಗಾಳದ ಬೆಹ್ರಾಂಪುರದ ಟಿಕೆಟ್ ನೀಡಲಾಗಿದೆ. ಇಲ್ಲಿ ಅವರಿಗೆ ಟಿಎಂಸಿಯಿಂದ ಮಾಜಿ ಕ್ರಿಕೆಟಿಗ ಯೂಸುಫ್‌ ಪಠಾಣ್‌ ಪ್ರತಿಸ್ಪರ್ಧಿಯಾಗಿದ್ದಾರೆ. 

ಉಳಿದಂತೆ ಕೇಂದ್ರದ ಮಾಜಿ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಪುತ್ರಿ ಪ್ರಣೀತಿಗೆ ಮಹಾರಾಷ್ಟ್ರದ ಸೊಲ್ಲಾಪುರ, ಅರುಣಾಚಲದ ಮಾಜಿ ಸಿಎಂ ನಬಂ ಟುಕಿಗೆ ಅರುಣಾಚಲ ಪಶ್ಚಿಮ ಕ್ಷೇತ್ರ, ಸೋನಾಲ್‌ ಪಟೇಲ್‌ಗೆ ಗುಜರಾತ್‌ನ ಗಾಂಧಿನಗರ, ದಾಹೋಡ್‌ನಿಂದ ಪ್ರಭಾಬೆನ್‌ ತವಿಯಾದ್‌, ಸೂರತ್‌ನಿಂದ ನಿಲೇಶ್‌ ಕುಂಬಾನಿಗೆ ಟಿಕೆಟ್‌ ನೀಡಲಾಗಿದೆ.