ಸಾರಾಂಶ
ಬಿಜೆಪಿಯು ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ಮಧ್ಯಮ ವರ್ಗದ ಜನತೆ ಹಾಗೂ ವೇತನದಾರರಲ್ಲಿ ಗೊಂದಲ ಹುಟ್ಟಿಸುವಂತಹ ಹೇಳಿಕೆಯನ್ನು ನಿಗ್ರಹಿಸಿ ಅಂತಹ ಹೇಳಿಕೆ ನೀಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ನವದೆಹಲಿ: ಬಿಜೆಪಿಯು ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ಮಧ್ಯಮ ವರ್ಗದ ಜನತೆ ಹಾಗೂ ವೇತನದಾರರಲ್ಲಿ ಗೊಂದಲ ಹುಟ್ಟಿಸುವಂತಹ ಹೇಳಿಕೆಯನ್ನು ನಿಗ್ರಹಿಸಿ ಅಂತಹ ಹೇಳಿಕೆ ನೀಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಈ ಕುರಿತು ಅಖಿಲ ಭಾರತ ವೃತ್ತಿಪರ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಚಕ್ರವರ್ತಿ ದೂರು ನೀಡಿದ್ದು, ಬಿಜೆಪಿಯ ನಾಯಕರೊಬ್ಬರು ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಜವಹರ್‌ಲಾಲ್ ನೆಹರೂ ರಾಷ್ಟ್ರೀಯ ಆದಾಯ ಮರುಹಂಚಿಕೆ ಯೋಜನೆ ಎಂಬ ಹೆಸರಿನಲ್ಲಿ ಎಲ್ಲರ ಬಳಿಯಿರುವ ಮೂರನೇ ಎರಡರಷ್ಟು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ವ್ಯಾಟ್ಸಾಪ್ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಅಪ್ಪಟ ಸುಳ್ಳಾಗಿದ್ದು, ಆ ನಾಯಕನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.ಈ ಕುರಿತು ದೆಹಲಿ ಪೊಲೀಸ್ ಮತ್ತು ಮೆಟಾ ಇಂಡಿಯಾ ಬಳಿಯೂ ದೂರು ನೀಡುವುದಾಗಿ ಪ್ರವೀಣ್ ತಿಳಿಸಿದ್ದಾರೆ.