ಕರ್ನಾಟಕ ಕಾಂಗ್ರೆಸ್
ಗ್ಯಾರಂಟಿ ಹೇಳಿದ್ದೆಷ್ಟು,ಕೊಟ್ಟಿದ್ದೆಷ್ಟು?: ಮೋದಿ
- ಕೊಟ್ಟ ಭರವಸೆ ಈಡೇರಿಸುವಲ್ಲಿ ಕೈ ವಿಫಲ- ಕಾಂಗ್ರೆಸ್‌ನ ಹುಸಿ ಭರವಸೆಗಳ ನಂಬಬೇಡಿ
- ಅಸ್ಸಾಂ ಎಲೆಕ್ಷನ್ ರ್‍ಯಾಲೀಲಿ ಪ್ರಧಾನಿ ಕಿಡಿ
ಗುವಾಹಟಿ: ‘ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಚುನಾವಣೆಗೂ ಮುನ್ನ ಅವರು ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದ್ದರು. ಆದರೆ ಇಲ್ಲಿಯವರೆಗೆ ಏನು ಮಾಡಿದ್ದಾರೆ? ಕಾಂಗ್ರೆಸ್‌ನ ಹುಸಿ ಭರವಸೆಗಳನ್ನು ನಂಬಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಹರಿಹಾಯ್ದಿದ್ದಾರೆ.
ಈ ಹಿಂದೆಯೂ ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಮೋದಿ ಟೀಕಿಸಿದ್ದರು. ಇದೀಗ ಅಸ್ಸಾಂನ ಬಾರ್ಪೆಟ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿಯೂ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.ಬಾರ್ಪೆಟ್‌ನಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ಸಿನ ಮೊದಲ ಕುಟುಂಬವು ದೇಶದಲ್ಲೇ ಅತ್ಯಂತ ಭ್ರಷ್ಟವಾಗಿದೆ. ಭಾರೀ ಪ್ರಮಾಣದ ಹಗರಣಗಳಲ್ಲಿ ಭಾಗಿಯಾಗಿದ್ದು, ಪ್ರಸ್ತುತ ಜಾಮೀನಿನ ಮೇಲೆ ಹೊರಗಿದೆ. ಕಾಂಗ್ರೆಸ್ ಕೇವಲ 2 ಕೆಲಸಗಳನ್ನು ಮಾಡುತ್ತದೆ. ಒಂದು ಸುಳ್ಳು ಹೇಳುವುದು, ಇನ್ನೊಂದು ಭ್ರಷ್ಟಾಚಾರದಲ್ಲಿ ತೊಡಗುವುದು. ಕರ್ನಾಟಕ, ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಲ್ಲಿ ಚುನಾವಣೆಗೆ ಮೊದಲು ದೊಡ್ಡ ಭರವಸೆಗಳನ್ನು ನೀಡಿದ್ದರು. ಎಷ್ಟನ್ನು ಈಡೇರಿಸಿದ್ದಾರೆ? ಅಸ್ಸಾಂನಲ್ಲಿ ಕಾಂಗ್ರೆಸ್‌ನ ಸುಳ್ಳು ಭರವಸೆಗಳಿಗೆ ಬಲಿಯಾಗಬೇಡಿ. ಅಭಿವೃದ್ಧಿಯ ಪ್ರಯಾಣ ಮುಂದುವರಿಯಲು ಸತತ 3ನೇ ಅವಧಿಗೆ ಬಿಜೆಪಿಗೆ ಮತ ಚಲಾಯಿಸಿ’ ಎಂದು ಮನವಿ ಮಾಡಿದರು.
ಮೋದಿ ಹೇಳಿದಂತೆಗ್ಯಾರಂಟಿ ನೀಡಿರಾಜ್ಯ ದಿವಾಳಿ ಆಗಿಲ್ಲ- ಐದು ಗ್ಯಾರಂಟಿ ಈಡೇರಿಸಿದ್ದೇವೆ- ನುಡಿದಂತೆ ನಡೆದಿದ್ದೇವೆ: ಸಿಎಂದಾವಣಗೆರೆ: ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆ ಮೆಚ್ಚಿದ್ದಾರೆ. ಗ್ಯಾರಂಟಿಗೆ ಓಟು ಹಾಕುತ್ತಾರೆ. ನಮ್ಮ ಕಾನ್ಫಿಂಡೆನ್ಸ್ ಇಂಪ್ರೂವ್ ಆಗಿದ್ದು, ನೂರಕ್ಕೆ ನೂರು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ದಾವಣಗೆರೆಯಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಪರ ಬೃಹತ್ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ‘ಬಡವರ ಗ್ಯಾರಂಟಿಗಳನ್ನು ಬಿಜೆಪಿ ವಿರೋಧಿಸುತ್ತಿದೆ. ಗ್ಯಾರಂಟಿ ಜಾರಿ ಮಾಡಿದರೆ ಸರ್ಕಾರ ದಿವಾಳಿಯಾಗುತ್ತದೆ ಎಂದು ಹಿಂದೆ ಕರ್ನಾಟಕ ಸರ್ಕಾರವನ್ನು ಉಲ್ಲೇಖಿಸಿ ರಾಜಸ್ಥಾನದಲ್ಲಿ ಪ್ರಧಾನಿ ಮೋದಿ ಟೀಕಿಸಿದ್ದರು. ಆದರೆ ಗ್ಯಾರಂಟಿ ಜಾರಿಯಿಂದ ರಾಜ್ಯವೇನು ದಿವಾಳಿಯಾಗಿಲ್ಲ. ನಾವು ಭರವಸೆ ನೀಡಿದಂತೆ ಎಲ್ಲಾ 5 ಗ್ಯಾರಂಟಿ ಜಾರಿಗೊಳಿಸಿದ್ದೇವೆ. ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ನಿಲ್ಲಲಿದೆ ಎಂದು ವಿಜಯೇಂದ್ರ, ಅಶೋಕ್ ಹೇಳಿದ್ದರು. ಆದರೆ ಗ್ಯಾರಂಟಿ ಯೋಜನೆಗಳನ್ನು ನಾವು ನಿಲ್ಲಿಸಿಲ್ಲ ಅವು ಮುಂದುರೆಯಲಿದೆ ಎಂದು ಹೇಳಿದ್ದಾರೆ.