ಸಾರಾಂಶ
ಮಹಾತ್ಮ ಗಾಂಧಿ ಕುತಂತ್ರಿಯಾಗಿದ್ದು, ರಾಹುಲ್ ಗಾಂಧಿಯನ್ನು ಮಹಾತ್ಮ ಎಂದು ಕರೆಯಲು ಅರ್ಹರಾಗಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್ ನಾಯಕ ರಾಜ್‌ಗುರು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ರಾಜ್‌ಕೋಟ್: ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಗುಜರಾತ್ ಕಾಂಗ್ರೆಸ್ ನಾಯಕ ಇಂದ್ರಾನಿಲ್ ರಾಜ್‌ಗುರು, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ಕುತಂತ್ರಿ ಎಂದು ಕರೆದು ವಿವಾದ ಸೃಷ್ಟಿಸಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್‌ಕೋಟ್ ಮಾಜಿ ಶಾಸಕ ರಾಜ್‌ಗುರು, ‘ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ, ದೇಶದ ಮುಂದಿನ ಮಹಾತ್ಮರಾಗಲಿದ್ದಾರೆ.
ಇವರು ಶುದ್ಧ ಮನಸ್ಸಿನವರು ಹಾಗೂ ತುಂಬಾ ಪ್ರಾಮಾಣಿಕರು. ಮಹಾತ್ಮ ಗಾಂಧಿ ಅಂದು ಕುತಂತ್ರಿಯಾಗಿದ್ದರು. ಆದರೆ ನಮ್ಮ ರಾಹುಲ್ ಗಾಂಧಿ ಅವರು ಮಾತ್ರ ಶ್ರೇಷ್ಠ ವ್ಯಕ್ತಿ.ಇವರು ಬಿಜೆಪಿಯ ದುರಾಡಳಿತದ ವಿರುದ್ಧ ಹೋರಾಡುತ್ತಿದ್ದಾರೆ. ಸಂವಿಧಾನ ಉಳಿವಿಗೆ ಶ್ರಮಿಸುತ್ತಿದ್ದಾರೆ. ಅವರನ್ನು ‘ಪಪ್ಪು’ ಎಂದು ಬಿಂಬಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.