ಕಾಂಗ್ರೆಸ್‌ನಿಂದ ದೇಶದ ಜನರ ಲೂಟಿ : ಮೋದಿ ವಾಗ್ದಾಳಿ

| N/A | Published : Sep 28 2025, 02:00 AM IST

ಸಾರಾಂಶ

‘ದೇಶದ ಜನರನ್ನು ಕಾಂಗ್ರೆಸ್‌ ಲೂಟಿ ಮಾಡಿತ್ತು. ಕಡಿಮೆ ಆದಾಯ ಹೊಂದಿರುವವರ ಮೇಲೆಯೂ ತೆರಿಗೆ ವಿಧಿಸುತ್ತಿತ್ತು’ ಎಂದು ಒಡಿಶಾದ ಝಾರ್ಸುಗುಡದಲ್ಲಿ ನಮೋ ಯುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

 ಝಾರ್ಸುಗುಡ (ಒಡಿಶಾ) :  ‘ದೇಶದ ಜನರನ್ನು ಕಾಂಗ್ರೆಸ್‌ ಲೂಟಿ ಮಾಡಿತ್ತು. ಕಡಿಮೆ ಆದಾಯ ಹೊಂದಿರುವವರ ಮೇಲೆಯೂ ತೆರಿಗೆ ವಿಧಿಸುತ್ತಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಒಡಿಶಾದ ಝಾರ್ಸುಗುಡದಲ್ಲಿ ನಮೋ ಯುವ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಜನರನ್ನು ಲೂಟಿ ಮಾಡುವ ಯಾವುದೇ ಅವಕಾಶವನ್ನು ಬಿಡಲಿಲ್ಲ. ವಾರ್ಷಿಕ 2 ಲಕ್ಷ ರು. ಆದಾಯ ಹೊಂದಿರುವವರ ಮೇಲೆಯೂ ತೆರಿಗೆ ವಿಧಿಸಿತ್ತು. ಬಿಜೆಪಿ ಆ ಮಿತಿಯನ್ನು 12 ಲಕ್ಷ ರು.ಗೆ ಹೆಚ್ಚಿಸಿತು. ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳು ಜನರನ್ನು ಲೂಟಿ ಮಾಡುತ್ತವೆ. ಅವರ ಬಗ್ಗೆ ಎಚ್ಚರದಿಂದಿರಿ’ ಎಂದರು.ಜಿಎಸ್‌ಟಿ ಸರಳೀಕರಣದಿಂದ ದೇಶದಲ್ಲಿ ಬೆಲೆ ಕುಸಿದರೂ ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯಗಳಲ್ಲಿ ವಿರುದ್ಧ ಸ್ಥಿತಿಯಿದೆ ಎಂದು ಆರೋಪಿಸಿದರು.

‘ನಮ್ಮ ಸರ್ಕಾರ ಸಿಮೆಂಟ್‌ ದರ ಇಳಿಸಿದಾಗ ಹಿಮಾಚಲ ಪ್ರದೇಶದಲ್ಲಿರುವ ಕಾಂಗ್ರೆಸ್‌ ಸರ್ಕಾರ ಅದರ ಮೇಲೆ ತನ್ನದೇ ತೆರಿಗೆ ವಿಧಿಸಿತು. ನಾವು ಜಿಎಸ್ಟಿ ಕಡಿತಗೊಳಿಸಿದಾಗ ದೇಶದೆಲ್ಲೆಡೆ ದರ ಕುಸಿತ ಕಂಡಿತು, ಆದರೆ ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಅದನ್ನು ಜನರಿಗೆ ತಲುಪಿಸಲು ವಿರೋಧಿಸಿದರು’ ಎಂದು ಹೇಳಿದರು.

Read more Articles on