ಲೋಕಸಭೆ ಚುನಾವಣೆಯ ಪ್ರಣಾಳಿಕೆಯನ್ನು ಏ.5 ರಂದು ಬಿಡುಗಡೆ ಮಾಡಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.

ನವದೆಹಲಿ: ಲೋಕಸಭೆ ಚುನಾವಣೆಯ ಪ್ರಣಾಳಿಕೆಯನ್ನು ಏ.5 ರಂದು ಬಿಡುಗಡೆ ಮಾಡಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು. 

ಈ ಕುರಿತು ಮಾತನಾಡಿದ ಅವರು, ಮಾ.16 ರಂದು ಪಾಂಚ್ ನ್ಯಾಯ ಮತ್ತು ಪಚ್ಚೀಸ್‌ ಗ್ಯಾರಂಟಿ ಬಿಡುಗಡೆ ಮಾಡಲಾಗಿದೆ. ಏ.3 ರಂದು ದೇಶಾದ್ಯಂತ 8 ಕೋಟಿ ಗ್ಯಾರಂಟಿ ಕಾರ್ಡ್‌ ವಿತರಿಸುವ ಘರ್ ಘರ್ ಗ್ಯಾರಂಟಿ ಅಭಿಯಾನ ಪ್ರಾರಂಭವಾಗಲಿದೆ.

 ಏ.5 ರಂದು ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಅವಾಜ್ ಭಾರತ್ ಕೀ ವೆಬ್‌ಸೈಟ್ ಮೂಲಕ ದೇಶದಾದ್ಯಂತ ಲಕ್ಷಾಂತರ ಜನರು ನೀಡಿರುವ ಅಭಿಪ್ರಾಯ ಆಧರಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದ್ದರು.