ಕಾಂಗ್ರೆಸ್‌ನಲ್ಲಿ ಮುಸ್ಲಿಮರು ಗುಲಾಮರಂತೆ ಇರುವ ಕಾರಣ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಸಂಸದ ಅಬ್ದುಲ್‌ ಖಲೀಕ್‌ ತಿಳಿಸಿದ್ದಾರೆ.

ಗುವಾಹಟ್ಟಿ: ಕಾಂಗ್ರೆಸ್ ಪಕ್ಷ ಮುಸ್ಲಿಂರನ್ನು ಗುಲಾಮರಂತೆ ನೋಡುತ್ತಿದೆ ಎಂದು ಅಸ್ಸಾಂ ಕಾಂಗ್ರೆಸ್‌ ಸಂಸದ ಅಬ್ದುಲ್‌ ಖಲೀಕ್‌ ಶನಿವಾರ ಆರೋಪಿಸಿದ್ದಾರೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಎರಡು ಬಾರಿ ಶಾಸಕರಾಗಿ ಮತ್ತು ಒಂದು ಬಾರಿ ಸಂಸದರಾಗಿದ್ದ ಖಲೀಕ್ ಅವರನ್ನು ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಟ್ಟ ಕಾರಣದಿಂದ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಒಂದು ರಾಷ್ಟ್ರೀಯ ಪಕ್ಷ ಮುಸ್ಲಿಂರನ್ನು ಗುಲಾಮರಂತೆ ನೋಡುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದ ಅವರು, ಅಸೋಮ್ ಗಣ ಪರಿಷತ್ (ಎಜಿಪಿ), ಟಿಎಂಸಿ ಮತ್ತು ಎಎಪಿ ಸೇರಿದಂತೆ ಹಲವಾರು ಪಕ್ಷಗಳು ತಮ್ಮೊಂದಿಗೆ ಸಂಪರ್ಕದಲ್ಲಿವೆ ಎಂದರು. ಆದರೆ ಯಾವ ಪಕ್ಷ ಸೇರುತ್ತಾರೆ ಎಂಬ ಸುಳಿವು ಬಿಟ್ಟುಕೊಟ್ಟಿಲ್ಲ.