ಸಾರಾಂಶ
ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಬಿಜೆಪಿಗೆ ವಲಸೆ ಹೋಗಲಿದ್ದಾರೆ ಎನ್ನಲಾಗಿದೆ.
ನವದೆಹಲಿ: ಈ ಹಿಂದೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಂಡೆದ್ದ ಜಿ 23 ನಾಯಕರ ಪೈಕಿ ಒಬ್ಬರಾದ, ಕೇಂದ್ರದ ಮಾಜಿ ಸಚಿವ ಮನೀಶ್ ತಿವಾರಿ ಕೂಡಾ ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಾಲಿ ಪಂಜಾಬ್‌ನ ಆನಂದ್‌ಪುರ ಸಾಹಿಬ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ತಿವಾರಿ, ಮುಂದಿನ ಚುನಾವಣೆಯಲ್ಲಿ ಲೂಧಿಯಾನಾ ಕ್ಷೇತ್ರದ ಟಿಕೆಟ್ ಖಾತ್ರಿಯಾದರೆ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಆದರೆ ಈ ವರದಿಗಳನ್ನು ತಿವಾರಿ ಅವರ ಕಚೇರಿ ಸ್ಪಷ್ಟವಾಗಿ ಅಲ್ಲಗಳೆದಿದೆ. ಹಾಲಿ ತಿವಾರಿ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ ಎಂದು ಹೇಳಿದೆ.