ಸಾರಾಂಶ
ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾದ ಕೆಲವೇ ದಿನಗಳಲ್ಲಿ ತಮಿಳುನಾಡು ಮತ್ತು ಪುದುಚೆರಿಯಲ್ಲಿ ಡಿಎಂಕೆ ನೇತೃತ್ವದ ಇಂಡಿಯಾ ಕೂಟ ತನ್ನ ಮಿತ್ರಪಕ್ಷಗಳೊಂದಿಗೆ ಸ್ಪರ್ಧಿಸುವ ಕ್ಷೇತ್ರಗಳ ಹಂಚಿಕೆ ಅಂತಿಮಗೊಳಿಸಿದೆ.
ಚೆನ್ನೈ: ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾದ ಕೆಲವೇ ದಿನಗಳಲ್ಲಿ ತಮಿಳುನಾಡು ಮತ್ತು ಪುದುಚೆರಿಯಲ್ಲಿ ಡಿಎಂಕೆ ನೇತೃತ್ವದ ಇಂಡಿಯಾ ಕೂಟ ತನ್ನ ಮಿತ್ರಪಕ್ಷಗಳೊಂದಿಗೆ ಸ್ಪರ್ಧಿಸುವ ಕ್ಷೇತ್ರಗಳ ಹಂಚಿಕೆ ಅಂತಿಮಗೊಳಿಸಿದೆ. ಅದರಂತೆ ಕಾಂಗ್ರೆಸ್‌ಗೆ ಹಾಲಿ ಆರು ಕ್ಷೇತ್ರಗಳ ಜೊತೆಗೆ ತನ್ನ ಎರಡು ಕ್ಷೇತ್ರಗಳನ್ನೂ ಡಿಎಂಕೆ ಬಿಟ್ಟುಕೊಟ್ಟಿದೆ. ಕಾಂಗ್ರೆಸ್ ಈ ಬಾರಿ ತಿರುವಳ್ಳೂರು, ಶಿವಗಂಗಾ, ಕೃಷ್ಣಗಿರಿ, ಕರೂರ್, ವಿರುಧ್‌ನಗರ ಮತ್ತು ಕನ್ಯಾಕುಮಾರಿಯಲ್ಲಿ ಮತ್ತೆ ಸ್ಪರ್ಧಿಸಲಿದೆ. ಅಲ್ಲದೆ ಹೊಸದಾಗಿ ಹಾಲಿ ಡಿಎಂಕೆ ಸಂಸದರಿರುವ ಕುಡಲೂರು, ತಿರುನೆಲ್ವೇಲಿ ಮತ್ತು ಎನ್‌ಡಿಎ ಸಂಸದರಿರುವ ಮೈಲಾಡತುರೈ ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ಜೊತೆಗೆ ಎಂಡಿಎಂಕೆ ಪಕ್ಷವು ತಿರುಚಿ ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ಕಳೆದ ಬಾರಿ ಇಂಡಿಯಾ ಮೈತ್ರಿಕೂಟ ತಮಿಳುನಾಡಿನ 39 ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು.