ಸಾರಾಂಶ
‘ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಅತ್ಯಾಚಾರಕ್ಕೆ ಬಲಿಯಾದ ಸಂತ್ರಸ್ತ ವೈದ್ಯೆಯ ತಂದೆಗೆ ಯಾವುದೇ ಹಣದ ಆಮಿಷ ಒಡ್ಡಿಲ್ಲ’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ಪಷ್ಟ ಪಡಿಸಿದ್ದಾರೆ.
ಕೋಲ್ಕತಾ: ‘ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಅತ್ಯಾಚಾರಕ್ಕೆ ಬಲಿಯಾದ ಸಂತ್ರಸ್ತ ವೈದ್ಯೆಯ ತಂದೆಗೆ ಯಾವುದೇ ಹಣದ ಆಮಿಷ ಒಡ್ಡಿಲ್ಲ’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ವೈದ್ಯೆಯ ಕುಟುಂಬಕ್ಕೆ ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಹಣದ ಆಮಿಷವೊಡ್ಡಿದೆ ಎನ್ನುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ಸೋಮವಾರ ಸಭೆಯೊಂದರಲ್ಲಿ ಮಾತನಾಡಿದ ಮಮತಾ, ‘ನಾನು ಎಂದಿಗೂ ಸಂತ್ರಸ್ತ ವೈದ್ಯೆ ಕುಟುಂಬಕ್ಕೆ ಹಣದ ಆಮಿಷ ಒಡ್ಡಿಲ್ಲ. ಈ ಆರೋಪವನ್ನು ಪ್ರಚಾರಕ್ಕಾಗಿ ಮಾಡಲಾಗುತ್ತಿದೆಯೇ ವಿನಾ ಮತ್ತೇನೂ ಅಲ್ಲ. ಮಗಳ ಸ್ಮರಣಾರ್ಥ ಏನಾದರೂ ಮಾಡಬೇಕಂತಿದ್ದರೆ ನಮ್ಮ ಸರ್ಕಾರ ನಿಮ್ಮ ಜತೆಗೆ ಇದೆ ಎಂದು ಪೋಷಕರಿಗೆ ಹೇಳಿದ್ದೆ ಅಷ್ಟೆ. ನನಗೆ ಯಾವಾಗ ಏನು ಮಾತನಾಡಬೇಕು ಎಂಬುದು ತಿಳಿದಿದೆ’ ಎಂದರು. ‘ಸರ್ಕಾರದ ವಿರುದ್ಧ ನಡೆದಿರುವ ಪ್ರತಿಭಟನೆ ಖಂಡಿತವಾಗಿ ಕೇಂದ್ರ ಸರ್ಕಾರ ಮತ್ತು ಕೆಲ ಎಡಪಕ್ಷಗಳ ಪಿತೂರಿ’ ಎಂದು ದೀದಿ ಆರೋಪಿಸಿದರು.