ಸಾರಾಂಶ
ನವದೆಹಲಿ: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು 2 ರು. ಹೆಚ್ಚಳ ಮಾಡಿದೆ. ಆದರೆ ಈ ಏರಿಕೆಯನ್ನು ತೈಲ ಕಂಪನಿಗಳ ಭರಿಸುವ ಕಾರಣ, ಗ್ರಾಹಕರಿಗೆ ವಿತರಿಸುವ ದರದಲ್ಲಿ ಯಾವುದೇ ಬದಲಾವಣೆ ಇರದು.
ನವದೆಹಲಿ: ಅಗತ್ಯ ವಸ್ತುಗಳ ದರ ಹೆಚ್ಚಳದ ನಡುವೆಯೇ ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದ್ದು, ಅಡುಗೆ ಅನಿಲದ ದರವನ್ನು 50 ರು.ಗೆ ಏರಿಕೆ ಮಾಡಿ ಕೇಂದ್ರ ಆದೇಶಿಸಿದೆ. ಇದು ಸಾಮಾನ್ಯ ಸಿಲಿಂಡರ್ ಜತೆ ಉಜ್ವಲಾ ಯೋಜನೆಗೂ ಅನ್ವಯವಾಗಲಿದೆ.
ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದು, ಅಡುಗೆ ಅನಿಲದ ದರವನ್ನು ಉಜ್ವಲಾ ಯೋಜನೆ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೆ ಹೆಚ್ಚಿಸಲಾಗಿದೆ. ಹೊಸ ದರದ ಅನ್ವಯ 14.2 ಕೇಜಿ ಅಡುಗೆ ಅನಿಲದ ದರ ₹803 ರಿಂದ ₹ 853ಕ್ಕೆ ಏರಿಕೆಯಾಗಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ₹ 503 ರಿಂದ ₹553ಕ್ಕೆ ಏರಿಕೆ ಮಾಡಲಾಗಿದೆ ಎಂದಿದ್ದಾರೆ.
ಇನ್ನೊಂದೆಡೆ ದಿಲ್ಲಿ ಸೇರಿ ಹಲವು ನಗರಗಳಲ್ಲಿ ಸಿಎನ್‌ಜಿ ದರವನ್ನು 1 ಕೇಜಿಗೆ 2 ರು. ಹೆಚ್ಚಿಸಿದೆ. ಇದರಿಂದ ಸಿಎನ್‌ಜಿ ದರ 75.09 ರು.ಗೆ ಏರಿದೆ.