- ಮೆಡಿಕಲ್‌ಗಳಲ್ಲಿ ಬೇಕಾಬಿಟ್ಟಿ ಸಿರಪ್ ಮಾರಾಟಕ್ಕೆ ಕೇಂದ್ರ ನಿರ್ಬಂಧ
- ಕಳಪೆ ಕೆಮ್ಮಿನ ಸಿರಪ್‌ನಿಂದ ಸಾವುಗಳು ಉಂಟಾದ ಕಾರಣ ಈ ಆದೇಶಪಿಟಿಐ ನವದೆಹಲಿಕಳಪೆ ಕೆಮ್ಮಿನ ಸಿರಪ್ ಸೇವನೆಯಿಂದ ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಸಾವುಗಳು ಸಂಭವಿಸಿದ ಕಾರಣ ಕೇಂದ್ರ ಸರ್ಕಾರವು, ಕೆಮ್ಮಿನ ಸಿರಪ್ ಸೇರಿ ಇತರೆ ಹಲವು ಸಿರಪ್‌ಗಳನ್ನು ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಔಷಧದ ಗುಣಮಟ್ಟ ಹಾಗೂ ರೋಗಿಗಳ ಸುರಕ್ಷತೆಯನ್ನು ಗಮದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಸಚಿವಾಲಯ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.ಔಷಧಗಳ (ಐದನೇ ತಿದ್ದುಪಡಿ) ನಿಯಮಗಳಿಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ. ಅದರಂತೆ ಇನ್ನು ಮುಂದೆ ಮೆಡಿಕಲ್ ಶಾಪ್‌ಗಳು ಕೇಳಿದವರಿಗೆಲ್ಲ ಕೆಮ್ಮಿನ ಸಿರಪ್ ಮಾರಾಟ ಮಾಡುವುದಕ್ಕೆ ಬ್ರೇಕ್ ಬೀಳಲಿದೆ.
ಕೆಮ್ಮಿನ ಶಿರಪ್ ಸೇರಿ ಸಿರಪ್ ಆಧಾರಿತ ಫಾರ್ಮುಲೇಷನ್‌ಗಳನ್ನು ಕಠಿಣ ನಿಯಂತ್ರಣ ವ್ಯವಸ್ಥೆಗೆ ತರುವುದು ಕೇಂದ್ರ ಸರ್ಕಾರ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾನೂನಿಗೆ ತಿದ್ದುಪಡಿ:
ಆರೋಗ್ಯ ಸಚಿವಾಲಯವು ಹೊರಡಿಸಿದ ಅಧಿಸೂಚನೆಯಲ್ಲಿ 1945ರ ಔಷಧಗಳ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಡ್ರಗ್ಸ್‌ಗಳ ವರ್ಗಗಳ ಷೆಡ್ಯೂಲ್ ‘ಕೆ’ನ ಐಟಂ ನಂಬರ್ 7ರಲ್ಲಿ ಸಿರಪ್ ಎಂಬ ಪದ ಕೈಬಿಡಲಾಗಿದೆ.ಷೆಡ್ಯೂಲ್ ‘ಕೆ’ ಕೆಲ ನಿರ್ದಿಷ್ಟ ಔಷಧಗಳ ಪಟ್ಟಿಯಾಗಿದೆ. ಈ ಔಷಧಗಳು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ಕೆಲ ನಿಯಮಗಳಿಂದ ಅದರಲ್ಲೂ ಮುಖ್ಯವಾಗಿ ಉತ್ಪಾದನೆ, ಮಾರಾಟ ಹಾಗೂ ಹಂಚಿಕೆಗೆ ಸಂಬಂಧಿಸಿ ಷರತ್ತುಸಹಿತ ವಿನಾಯ್ತಿ ಪಡೆದಿರುತ್ತದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಕೆಮ್ಮಿನ ಔಷಧದ ಮುಕ್ತ ಮಾರಾಟ ಸಂಬಂಧ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿತ್ತು. ಅದನ್ನು ಆಧರಿಸಿ ಇದೀಗ ಕೆಮ್ಮಿನ ಸಿರಪ್‌ನ ಮುಕ್ತ ಮಾರಾಟ ನಿರ್ಬಂಧಿಸಿ ಆದೇಶ ಹೊರಡಿಸಿದೆ.