ವೈದ್ಯಕೀಯ ಕೋರ್ಸ್‌ಗಳ ನೀಟ್‌ ಪ್ರಶ್ನೆಪತ್ರಿಕೆ ವಿವಾದಗಳಿಗೆ ತೆರೆ - ಆ.14ರಿಂದ ನೀಟ್‌ ಕೌನ್ಸಿಲಿಂಗ್‌ ಆರಂಭ

| Published : Jul 30 2024, 12:34 AM IST / Updated: Jul 30 2024, 05:43 AM IST

ವೈದ್ಯಕೀಯ ಕೋರ್ಸ್‌ಗಳ ನೀಟ್‌ ಪ್ರಶ್ನೆಪತ್ರಿಕೆ ವಿವಾದಗಳಿಗೆ ತೆರೆ - ಆ.14ರಿಂದ ನೀಟ್‌ ಕೌನ್ಸಿಲಿಂಗ್‌ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ನೀಟ್‌ ಪ್ರಶ್ನೆಪತ್ರಿಕೆ ವಿವಾದಗಳಿಗೆ ತೆರೆ ಬಿದ್ದ ಬೆನ್ನಲ್ಲೇ, ನೀಟ್‌ -ಯುಜಿ ಕೌನ್ಸೆಲಿಂಗ್‌ ಆರಂಭ ದಿನಾಂಕವನ್ನು ಸೋಮವಾರ ಪ್ರಕಟಿಸಲಾಗಿದೆ.

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ನೀಟ್‌ ಪ್ರಶ್ನೆಪತ್ರಿಕೆ ವಿವಾದಗಳಿಗೆ ತೆರೆ ಬಿದ್ದ ಬೆನ್ನಲ್ಲೇ, ನೀಟ್‌ -ಯುಜಿ ಕೌನ್ಸೆಲಿಂಗ್‌ ಆರಂಭ ದಿನಾಂಕವನ್ನು ಸೋಮವಾರ ಪ್ರಕಟಿಸಲಾಗಿದೆ. ಆ.14ರಿಂದ ಕೌನ್ಸೆಲಿಂಗ್‌ ಪ್ರಕ್ರಿಯೆ ಪ್ರಾರಂಭವಾಗಲಿದೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಪ್ರಕಟಣೆ ಹೊರಡಿಸಿದೆ.ಕೌನ್ಸೆಲಿಂಗ್‌ ಪ್ರಕ್ರಿಯೆ ಜುಲೈನಲ್ಲೇ ಆರಂಭವಾಗಬೇಕಿತ್ತಾದರೂ, ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆದು ತೀರ್ಪು ಬಾಕಿ ಇದ್ದ ಹಿನ್ನೆಲೆಯಲ್ಲಿ ಪ್ರಕ್ರಿಯೆ ವಿಳಂಬವಾಗಿತ್ತು.

ಈ ಕುರಿತು ಮಾಹಿತಿ ನೀಡಿರುವ ಎನ್‌ಎಂಸಿ ಕಾರ್ಯದರ್ಶಿ ಡಾ.ಬಿ.ಶ್ರೀನಿವಾಸ್‌, ಆಗಸ್ಟ್‌ ಮೊದಲ ವಾರದಿಂದ ಕೌನ್ಸೆಲಿಂಗ್‌ಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಕೌನ್ಸೆಲಿಂಗ್ ಕುರಿತು ಹೆಚ್ಚಿನ ಮಾಹಿತಿ ಮತ್ತು ನೋಟಿಸ್‌ಗಳಿಗಾಗಿ ಎನ್‌ಎಂಸಿ ವೈಬ್‌ಸೈಟ್‌ ಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ.ದೇಶಾದ್ಯಂತ ಇರುವ 710 ವೈದ್ಯಕೀಯ ಕಾಲೇಜುಗಳ 1.10 ಲಕ್ಷ ವೈದ್ಯಕೀಯ ಸೀಟುಗಳ ಹಂಚಿಕೆಗಾಗಿ ಈ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಯಲಿದೆ. ಇದಲ್ಲದೇ 21000 ಬಿಡಿಎಸ್‌, ಆಯುಷ್‌ ಮತ್ತು ನರ್ಸಿಂಗ್‌ ಸೀಟುಗಳಿಗೂ ಕೌನ್ಸೆಲಿಂಗ್‌ ನಡೆಯಲಿದೆ.