ಬಂಗಾಳ ಮೊದಲ ಹಂತದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಝಾಲ್ಮುರಿ ಖರೀದಿಸಿ ಸುದ್ದಿಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಠಕ್ಕರ್‌ ನೀಡಲು ಸ್ಥಳೀಯ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ್ದಾರೆ.

ನವದೆಹಲಿ: ಬಂಗಾಳ ಮೊದಲ ಹಂತದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಝಾಲ್ಮುರಿ ಖರೀದಿಸಿ ಸುದ್ದಿಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಠಕ್ಕರ್‌ ನೀಡಲು ಸ್ಥಳೀಯ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ್ದಾರೆ.

ಎರಡನೇ ಹಂತದ ಚುನಾವಣಾ ಕಾವು

ಪಶ್ಚಿಮ ಬಂಗಾಳದಲ್ಲಿ ಸದ್ಯ ಎರಡನೇ ಹಂತದ ಚುನಾವಣಾ ಕಾವು ಜೋರಾಗಿದೆ. ಸ್ಥಳೀಯ ಬೀದಿಗಳಲ್ಲಿ ಮತ ಪ್ರಚಾರ ನಡೆಸಿದ ಮಮತಾ ಜನನಿಬಿಡ ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡಿದ್ದಾರೆ. 

ಖರೀದಿದಾರರು ಮತ್ತು ಗ್ರಾಹಕರೊಂದಿಗೆ ಸಂವಹನ

ಅಲ್ಲಿ ಖರೀದಿದಾರರು ಮತ್ತು ಗ್ರಾಹಕರೊಂದಿಗೆ ಸಂವಹನ ನಡೆಸಿದರು. ವ್ಯಾಪಾರಿಗಳ ಜತೆಗೆ ತರಕಾರಿಗಳ ಬೆಲೆ ವಿಚಾರಿಸುತ್ತಾ ದೀದಿ ಮಹಿಳಾ ವ್ಯಾಪಾರಿಗಳ ಜತೆ ಮಾತನಾಡಿ ಅವರ ದೂರುಗಳನ್ನು ಆಲಿಸಿ ಗಮನ ಸೆಳೆದರು.