ಸಾರಾಂಶ
ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವುದು ದಾಖಲಿಸಿದ ಬೆನ್ನಲ್ಲೇ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಪ್ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ, ‘ದೇಶಕ್ಕೆ ಗಂಭೀರ ರಾಜಕೀಯ ಪರಿವರ್ತನೆ, ವಿಕಸಿತ ಭಾರತದ ಅಗತ್ಯವಿದೆಯೇ ಹೊರತು ಧೂರ್ತರು, ಮೂರ್ಖರ ರಾಜಕಾರಣ ಅಲ್ಲ’ ಎಂದಿದ್ದಾರೆ.
ನವದೆಹಲಿ: ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವುದು ದಾಖಲಿಸಿದ ಬೆನ್ನಲ್ಲೇ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಪ್ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ, ‘ದೇಶಕ್ಕೆ ಗಂಭೀರ ರಾಜಕೀಯ ಪರಿವರ್ತನೆ, ವಿಕಸಿತ ಭಾರತದ ಅಗತ್ಯವಿದೆಯೇ ಹೊರತು ಧೂರ್ತರು, ಮೂರ್ಖರ ರಾಜಕಾರಣ ಅಲ್ಲ’ ಎಂದಿದ್ದಾರೆ.
ಪಕ್ಷದ ಕೇಂದ್ರ ಕಚೇರಿಯಿಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಶಾರ್ಟ್‌ಕಟ್ ರಾಜಕಾರಣವನ್ನು ಶಾರ್ಟ್ ಸರ್ಕಿಟ್ ಮಾಡಿರುವ ಜನಾದೇಶವು, ರಾಜಕೀಯದಲ್ಲಿ ಭ್ರಷ್ಟಾಚಾರ ಹಾಗೂ ಸುಳ್ಳಿಗೆ ಜಾಗವಿಲ್ಲ ಎಂದಿದೆ. ರಾಜಕಾರಣವನ್ನು ಬದಲಿಸುತ್ತೇವೆ ಎಂದು ಬಂದ ಆಪ್-ದಾ(ವಿಪತ್ತು) ಅಪ್ರಾಣಿಕತೆಯನ್ನು ತೋರಿತು. ಅದನ್ನು ಹೊರಗಟ್ಟಿದ ದೆಹಲಿ ಜನ ಬಿಜೆಪಿಯ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ’ ಎನ್ನುತ್ತಾ, ಮೋದಿಯವರ ಗ್ಯಾರಂಟಿಯ ಮೇಲೆ ಭರವಸೆಯಿಟ್ಟ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜತೆಗೆ, ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರರಾಜಧಾನಿ ವಲಯದ ಎಲ್ಲಾ ರಾಜ್ಯಗಳನ್ನು ಆಳುತ್ತಿದೆ ಎಂದು ಹರ್ಷಿಸಿದ್ದಾರೆ.ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಮೋದಿ, ‘ಕಾಂಗ್ರೆಸ್ ತನ್ನ ಮಿತ್ರಪಕ್ಷಗಳ ಚುನಾವಣಾ ತಂತ್ರಗಳನ್ನು ಕದ್ದು, ಅವರ ವೋಟ್‌ಬ್ಯಾಂಕ್ ಕಸಿಯುತ್ತಿದೆ’ ಎನ್ನುತ್ತಾ ಉತ್ತರಪ್ರದೇಶ, ಬಿಹಾರ್, ಕಾಶ್ಮೀರ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ಉದಾಹರಣೆ ನೀಡಿದರು. ಜತೆಗೆ, ಕಾಂಗ್ರೆಸ್ ಹಾಗೂ ಆಪ್ ನಗರ ನಕ್ಸಲರನ್ನು ಬೆಂಬಲಿಸುತ್ತಿವೆ ಎಂದರು.