ಭಾರತದಲ್ಲಿ 5,000 ಸೈಬರ್ ಕಮಾಂಡೋಗಳ ನೇಮಕಾತಿಗೆ ಸಿದ್ಧತೆ : ಕೇಂದ್ರ ಗೃಹ ಸಚಿವ ಅಮಿತ್‌ ಶಾ

| Published : Sep 11 2024, 01:13 AM IST / Updated: Sep 11 2024, 05:21 AM IST

ಸಾರಾಂಶ

ಸೈಬರ್ ಅಪರಾಧಗಳನ್ನು ತಡೆಯಲು ಮುಂದಿನ 5 ವರ್ಷಗಳಲ್ಲಿ 5,000 ಸೈಬರ್ ಕಮಾಂಡೋಗಳನ್ನು ನೇಮಿಸಿಕೊಳ್ಳಲು ಭಾರತ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಕಮಾಂಡೋಗಳಿಗೆ ಸೈಬರ್‌ ದಾಳಿಯನ್ನು ತಡೆಯುವುದರ ಬಗ್ಗೆ ತರಬೇತಿ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

ನವದೆಹಲಿ: ಭಾರತದಲ್ಲಿ ಸೈಬರ್ ಅಪರಾಧಗಳನ್ನು ತಡೆಯಲು ಮುಂದಿನ 5 ವರ್ಷಗಳಲ್ಲಿ 5,000 ಸೈಬರ್ ಕಮಾಂಡೋಗಳನ್ನು ನೇಮಿಸಿಕೊಳ್ಳಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

ಮಂಗಳವಾರ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ 5000 ಕಮಾಂಡೋಗಳಿಗೆ ಸೈಬರ್‌ ದಾಳಿಯನ್ನು ತಡೆಯುವುದರ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

ಸೈಬರ್‌ ಸುರಕ್ಷಿತೆ ಬಗ್ಗೆ ಒತ್ತಿ ಹೇಳಿದ ಅವರು, ‘ವಿಶ್ವದ ಶೇ.46 ರಷ್ಟು ಡಿಜಿಟಲ್ ವಹಿವಾಟುಗಳು ಭಾರತದಲ್ಲಿ ನಡೆಯುತ್ತಿವೆ. ಸೈಬರ್‌ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳದೇ ದೇಶದ ಪ್ರಗತಿ ಸಾಧ್ಯವಿಲ್ಲ. ಇದೊಂದು ರಾಷ್ಟ್ರೀಯ ಭದ್ರತೆಯ ಅವಿಭಾಜ್ಯ ಅಂಗವಾಗಿದೆ’ ಎಂದು ಹೇಳಿದರು.