ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಸೋಮವಾರ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಸದಸ್ಯರೊಬ್ಬರನ್ನು ಬಂಧಿಸಿದೆ.

ತಿರುವನಂತಪುರ: ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಸೋಮವಾರ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಸದಸ್ಯರೊಬ್ಬರನ್ನು ಬಂಧಿಸಿದೆ.

ಬಂಧಿತ ವಿಜಯ ಕುಮಾರ್‌ 2019ರಲ್ಲಿ ಟಿಡಿಬಿ ಸದಸ್ಯರಾಗಿದ್ದರು

ಬಂಧಿತ ವಿಜಯ ಕುಮಾರ್‌ 2019ರಲ್ಲಿ ಟಿಡಿಬಿ ಸದಸ್ಯರಾಗಿದ್ದರು. ಚಿನ್ನಲೇಪನದ ಗುತ್ತಿಗೆಯನ್ನು ಇನ್ನೊಬ್ಬ ಬಂಧಿತ ಆರೋಪಿ, ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿಗೆ ಕೊಡುವ ಪ್ರಸ್ತಾವಕ್ಕೆ ಅನುಮೋದನೆ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಸೋಮವಾರ ಇಲ್ಲಿನ ಎಸ್‌ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ವಿಚಾರಣೆ ಬಳಿಕ ವಿಜಯ್‌ ಕುಮಾರ್‌ರನ್ನು ಎಸ್‌ಐಟಿ ಬಂಧಿಸಿದೆ. ಇದರಿಂದಾಗಿ ಈವರೆಗೆ ಬಂಧಿತರ ಸಂಖ್ಯೆಯು 10ಕ್ಕೆ ಏರಿಕೆಯಾಗಿದೆ.

ಮಕರವಿಳಕ್ಕು ಜಾತ್ರೆಗಾಗಿ ಇಂದಿನಿಂದ ಶಬರಿಮಲೆ ಓಪನ್‌

ಶಬರಿಮಲೆ (ಕೇರಳ): ಪವಿತ್ರ ಶಬರಿಮಲೆಯಲ್ಲಿ ಪ್ರತಿ ವರ್ಷ ನಡೆಯುವ ಮಕರವಿಳಕ್ಕು ಮಹೋತ್ಸವಕ್ಕಾಗಿ ಮಂಗಳವಾರ ಸಂಜೆಯಿಂದ ದೇಗುಲ ಮತ್ತೆ ತೆರೆಯಲಿದೆ. ಜ.14ರ ಮಕರ ಸಂಕ್ರಾತಿವರೆಗೆ ಈ ಆಚರಣೆ ನಡೆಯಲಿದೆ.

ಡಿ.30ರ ಸಂಜೆ 5 ಗಂಟೆಗೆ ದೇವಾಲಯದ ತಂತ್ರಿ ಮಹೇಶ್‌ ಮೋಹನರು ಸಮ್ಮುಖದಲ್ಲಿ ಪ್ರಧಾನ ಅರ್ಚಕ ಇ.ಡಿ. ಪ್ರಸಾದ್‌ ಗರ್ಭಗುಡಿ ಬಾಗಿಲನ್ನು ತೆರೆಯಲಿದ್ದಾರೆ. ಆ ಬಳಿಕ ಸನ್ನಿಧಾನದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಲಿದ್ದು, ಆ ಬಳಿಕ ಭಕ್ತರಿಗೆ 18 ಮೆಟ್ಟಿಲುಗಳನ್ನೇರಲು ಅವಕಾಶ ಮಾಡಿಕೊಡಲಾಗುತ್ತದೆ. 41 ದಿನಗಳ ಮಂಡಲ ಪೂಜೆ ಮುಕ್ತಾಯದ ಬಳಿಕ ಡಿ. 27ರಂದು ಸಂಪ್ರದಾಯದಂತೆ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗಿತ್ತು.