ಮಾನಹಾನಿ ದಾವೆ: ಮೇಧಾ ಪಾಟ್ಕರ್‌ ತಪ್ಪಿತಸ್ಥೆ

| Published : May 25 2024, 12:48 AM IST / Updated: May 25 2024, 06:18 AM IST

ಸಾರಾಂಶ

ಸಾಮಾಜಿಕ ಕಾರ್ಯಕರ್ತೆ ಹಾಗೂ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರನ್ನು ಮಾನಹಾನಿ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.

ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ಹಾಗೂ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರನ್ನು ಮಾನಹಾನಿ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.

2000ನೇ ಇಸವಿಯಲ್ಲಿ ಎನ್‌ಜಿಒ ಒಂದರ ಮುಖ್ಯಸ್ಥರಾಗಿದ್ದ ಈಗಿನ ದೆಹಲಿ ಲೆಫ್ಟಿನೆಂಟ್‌ ಗೌರ್ನರ್‌ (ಉಪರಾಜ್ಯಪಾಲ) ವಿ.ಕೆ. ಸಕ್ಸೇನಾ ಅವರು ಹಾಕಿದ್ದ ಮಾನಹಾನಿ ದಾವೆ ಇದಾಗಿತ್ತು. ಆದೇಶ ಪ್ರಕಟಿಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ, ಮೇಧಾಗೆ ಶಿಕ್ಷೆಯನ್ನು ಇನ್ನೂ ಪ್ರಕಟಿಸಿಲ್ಲ. 2 ವರ್ಷ ಜೈಲು ಶಿಕ್ಷೆ ಹಾಗೂ ದಂಡಕ್ಕೆ ಅವರು ಗುರಿಯಾಗುವ ಸಾಧ್ಯತೆ ಇದೆ.

ಏನಿದು ಪ್ರಕರಣ?:

2000 ಇಸವಿಯಲ್ಲಿ ಸಕ್ಸೇನಾ ಅವರ ಸಂಸ್ಥೆಯು ಟೀವಿ ಚಾನೆಲ್‌ ಹಾಗೂ ಪತ್ರಿಕೆಗಳಿಗೆ ಸಕ್ಸೇನಾ ಅವರ ನರ್ಮದಾ ಬಚಾವೋ ಆಂದೋಲನದ ವಿರುದ್ಧ ಜಾಹೀರಾತು ಪ್ರಕಟಿಸಿತ್ತು. ಆಗ ಪಾಟ್ಕರ್‌ ಅವರು ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದರು ಎಂದು ಆಪಾದಿಸಿ ಸಕ್ಸೇನಾ ಮೊಕದ್ದಮೆ ದಾಖಲಿಸಿದ್ದರು