ಸಾರಾಂಶ
96 ವರ್ಷದ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಕಳೆದ 40 ವರ್ಷಗಳಿಂದ ಪಿಂಚಣಿ ನೀಡದೆ ವಿಳಂಬ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ದೆಹಲಿ ಹೈಕೋರ್ಟ್, ಸರ್ಕಾರಕ್ಕೆ 20,000 ರು. ದಂಡ ವಿಧಿಸಿದೆ.
ನವದೆಹಲಿ: 96 ವರ್ಷದ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಕಳೆದ 40 ವರ್ಷಗಳಿಂದ ಪಿಂಚಣಿ ನೀಡದೆ ವಿಳಂಬ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ದೆಹಲಿ ಹೈಕೋರ್ಟ್, ಸರ್ಕಾರಕ್ಕೆ 20,000 ರು. ದಂಡ ವಿಧಿಸಿದೆ. ಅಲ್ಲದೇ 1980ರಿಂದ ಅರ್ಜಿದಾರರಿಗೆ ನೀಡದೇ ಇರುವ ‘ಸ್ವತಂತ್ರತಾ ಸೈನಿಕ್ ಸಮ್ಮಾನ್’ ಅಡಿಯ ಪಿಂಚಣಿಯನ್ನು ವಾರ್ಷಿಕ ಶೇ.6ರಷ್ಟು ಬಡ್ಡಿಯೊಂದಿಗೆ 6 ವಾರಗಳಲ್ಲಿ ಪೂರ್ತಿ ಪಾವತಿ ಮಾಡಬೇಕು ಎಂದು ಆದೇಶಿಸಿದೆ. 01.01.1927ರಂದು ಜನಿಸಿರುವ ವ್ಯಕ್ತಿ ಕ್ವಿಟ್ ಇಂಡಿಯಾ ಸೇರಿದಂತೆ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.