ಸಾರಾಂಶ
3 ವರ್ಷಗಳಿಗೂ ಅಧಿಕ ಕಾಲ ವಿಶ್ವವನ್ನು ಕಾಡಿ ತೆರೆಮರೆಗೆ ಸರಿದಿದ್ದ ಕೊರೋನಾ ಮತ್ತೆ ಸದ್ದು ಮಾಡತೊಡಗಿದೆ.
ಹಾಂಕಾಂಗ್/ಸಿಂಗಾಪುರ: 3 ವರ್ಷಗಳಿಗೂ ಅಧಿಕ ಕಾಲ ವಿಶ್ವವನ್ನು ಕಾಡಿ ತೆರೆಮರೆಗೆ ಸರಿದಿದ್ದ ಕೊರೋನಾ ಮತ್ತೆ ಸದ್ದು ಮಾಡತೊಡಗಿದೆ.
ಸಿಂಗಾಪುರದಲ್ಲಿ ಮೇ 3ಕ್ಕೆ ಅಂತ್ಯವಾದ ವಾರದಲ್ಲಿ 14200 ಕೋವಿಡ್ ಪ್ರಕರಣ ದಾಖಲಾಗಿದೆ. ಇದು ಹಿಂದಿನ ವಾರಕ್ಕೆ ಹೋಲಿಸಿದರೆ ಶೇ.28ರಷ್ಟು ಹೆಚ್ಚಾಗಿದೆ. ಕಳೆದ ವಾರ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣದಲ್ಲೂ ಶೇ.30ರಷ್ಟು ಏರಿಕೆ ಕಂಡುಬಂದಿದೆ. ಜನರಲ್ಲಿ ಕೋವಿಡ್ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗಿರಬಹುದು. ಆದರೆ ಪ್ರಸಕ್ತ ಕಾಣಿಸಿಕೊಂಡಿರುವ ಕೋವಿಡ್ ತಳಿ ಹೆಚ್ಚು ಪ್ರಸರಣಕಾರಿ ಎಂಬುದಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.ಇನ್ನೊಂದೆಡೆ ಹಾಂಕಾಂಗ್‌ನಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಈ ವರ್ಷದ ಗರಿಷ್ಠಕ್ಕೆ ತಲುಪಿದೆ. ಅಂತೆಯೇ, ಸಾವಿನ ಪ್ರಕರಣಗಳೂ ಹೆಚ್ಚಾಗುತ್ತಿವೆ. ನೀರಿನಲ್ಲಿ ಕಂಡುಬರುತ್ತಿರುವ ವೈರಾಣು, ಹೆಚ್ಚುತ್ತಿರುವ ಕೋವಿಡ್ ಪರೀಕ್ಷೆ ಮತ್ತು ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಿಂದ ಮತ್ತೆ ಕೊರೋನಾ ಸ್ಫೋಟವಾಗುವ ಭಯ ಉದ್ಭವವಾಗಿದೆ.
ಕೊರೋನಾ ಮೊದಲ ಬಾರಿ 2019ರ ನವೆಂಬರ್‌ನಲ್ಲಿ ಪತ್ತೆಯಾಗಿದ್ದು, 704,753,890 ಜನರಲ್ಲಿ ಕಾಣಿಸಿಕೊಂಡಿತ್ತು. 7,010,681 ಮಂದಿ ವಿಶ್ವಾದ್ಯಂತ ಬಲಿಯಾಗಿದ್ದರು.)
)

;Resize=(128,128))
;Resize=(128,128))