ಪ್ರಧಾನಿ ಮೋದಿ ನಿಡಿದ್ದ ಔತಣಕೂಟದಲ್ಲಿ ಕೊಲ್ಲಂನ ಸಿಪಿಎಂ ಸಂಸದ ಪ್ರೇಮಚಂದ್ರನ್‌ ಭಾಗಿಯಾಗಿದ್ದಕ್ಕೆ ಪಕ್ಷ ಕಿಡಿಕಾರಿದೆ.

ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ವಿವಿಧ ಪಕ್ಷದ ಸಂಸದರ ಔತಣಕೂಟದಲ್ಲಿ ಕೇರಳದ ಕೊಲ್ಲಂನ ಸಂಸದ ಪ್ರೇಮಚಂದ್ರನ್‌ ಭಾಗಿಯಾಗಿದಕ್ಕೆ ಸಿಪಿಎಂ ಕಿಡಿಕಾರಿದೆ.

‘ಪ್ರಧಾನಿಗೆ ಹತ್ತಿರವಾಗಲು ಪ್ರೇಮಚಂದ್ರನ್‌ ಔತಣದಲ್ಲಿ ಭಾಗಿಯಾಗಿರಬಹುದು’ ಎಂದು ಸಿಪಿಎಂ ವ್ಯಂಗ್ಯವಾಡಿದೆ.

ಆದರೆ ಇದು ಕೇವಲ ಸೌಹಾರ್ದಯುತ ಸಭೆಯಾಗಿದ್ದು, ರಾಜಕೀಯವನ್ನು ಮೀರಿದ ಸೌಹಾರ್ದತೆಯಾಗಿದೆ’ ಎಂದು ಆರ್‌ಎಸ್‌ಪಿ ಪಕ್ಷದ ಪ್ರೇಮಚಂದ್ರನ್‌ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.