ಬಂಗಾಳಕೊಲ್ಲಿ ಹಾಗೂ ಶ್ರೀಲಂಕಾದ ಕರಾವಳಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಅದು ಚಂಡಮಾರುತವಾಗಿ ಬದಲಾಗಲಿದೆ ಎಂದು ಹವಾಮಾನಾ ಇಲಾಖೆ ಹೇಳಿದೆ. ಈ ಚಂಡಮಾರುತಕ್ಕೆ ದಿತ್ವಾ ಎಂದು ಹೆಸರಿಡಲಾಗಿದ್ದು, ನ.29ರ ಸಂಜೆ ಅಥವಾ ನ.30ರ ಬೆಳಗ್ಗೆ ತಮಿಳುನಾಡಿಗೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಹೇಳಿದೆ.
ನವದೆಹಲಿ: ಬಂಗಾಳಕೊಲ್ಲಿ ಹಾಗೂ ಶ್ರೀಲಂಕಾದ ಕರಾವಳಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಅದು ಚಂಡಮಾರುತವಾಗಿ ಬದಲಾಗಲಿದೆ ಎಂದು ಹವಾಮಾನಾ ಇಲಾಖೆ ಹೇಳಿದೆ. ಈ ಚಂಡಮಾರುತಕ್ಕೆ ದಿತ್ವಾ ಎಂದು ಹೆಸರಿಡಲಾಗಿದ್ದು, ನ.29ರ ಸಂಜೆ ಅಥವಾ ನ.30ರ ಬೆಳಗ್ಗೆ ತಮಿಳುನಾಡಿಗೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಹೇಳಿದೆ.
ಚಂಡಮಾರುತದ ಪರಿಣಾಮ
ಚಂಡಮಾರುತದ ಪರಿಣಾಮ ಪುದುಚೇರಿ, ಆಂಧ್ರಪ್ರದೇಶ, ತಮಿಳುನಾಡಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಕೆಲ ದಿನಗಳ ಹಿಂದೆ ಸೃಷ್ಟಿಯಾಗಿದ್ದ ಸೆನ್ಯಾರಾ ಚಂಡಮಾರುತದ ತೀವ್ರತೆ ಕಳೆದುಕೊಂಡ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರದಿಂದ 3 ದಿನ ಅತಿಹೆಚ್ಚು ಮಳೆಯಾಗುವ ಸೂಚನೆ ನೀಡಲಾಗಿದೆ. ಮೀನುಗಾರರಿಗೆ ಕೆಲ ದಿನ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.
ದ್ವಿತಾ ಎಂದರೇನು?:
‘ದ್ವಿತಾ’ ಎಂಬ ಹೆಸರನ್ನು ಯೆಮೆನ್ ಸೂಚಿಸಿದ್ದು, ಇದು ವಿಶಿಷ್ಟ ಕರಾವಳಿ ಪರಿಸರ ವ್ಯವಸ್ಥೆಗೆ ಹೆಸರುವಾಸಿಯಾದ ಸೊಕೊಟ್ರಾ ದ್ವೀಪದಲ್ಲಿರುವ ಡೆಟ್ವಾ ಲಗೂನ್ ಕಡಲತೀರವನ್ನು ಸೂಚಿಸುತ್ತದೆ.