ಅಕ್ರಮವಾಗಿ ಜಂತರ್ ಮಂತರ್ ಪ್ರವೇಶಿ ಶಾಂತಿಭಂಗದ ಆರೋಪದ ಮೇಲೆ 7 ದಿನದಿಂದ ಬಂಧನದಲ್ಲಿದ್ದ ಜಿರಳೆ ಪಕ್ಷದ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ಬಿಡುಗಡೆಗೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಕೋರ್ಟ್‌ ಬುಧವಾರ ಆದೇಶಿಸಿದೆ.

ನವದೆಹಲಿ : ಅಕ್ರಮವಾಗಿ ಜಂತರ್ ಮಂತರ್ ಪ್ರವೇಶಿ ಶಾಂತಿಭಂಗದ ಆರೋಪದ ಮೇಲೆ 7 ದಿನದಿಂದ ಬಂಧನದಲ್ಲಿದ್ದ ಜಿರಳೆ ಪಕ್ಷದ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ಬಿಡುಗಡೆಗೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಕೋರ್ಟ್‌ ಬುಧವಾರ ಆದೇಶಿಸಿದೆ.

ಮ್ಯಾಜಿಸ್ಟ್ರೇಟ್ ಮುಂದೆ ಹಾಜರು

ರಾಂಕಾ ಹಾಗೂ ದಾಸ್ ಅವರ ನ್ಯಾಯಾಂಗ ಬಂಧನ ಅವಧಿ ಬುಧವಾರ ಮುಗಿದ ಕಾರಣ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಆಗ ನ್ಯಾಯಾಂಗ ಬಂಧನ ಅವಧಿಯನ್ನು 3 ದಿನ ವಿಸ್ತರಿಸಲು ದೆಹಲಿ ಪೊಲೀಸರು ಕೋರಿದರು. ಆದರೆ ಪೊಲೀಸರ ಮನವಿ ತಿರಸ್ಕರಿಸಿದ ಕೋರ್ಟ್‌, ಇಬ್ಬರ ಬಿಡುಗಡೆಗೂ ಆದೇಶಿಸಿದೆ.

ಈ ವೇಳೆ ರಾಂಕಾ ಹಾಗೂ ದಾಸ್, ‘ನಾವು ಇನ್ನು ಶಾಂತಿ ಭಂಗ ಮಾಡಲ್ಲ’ ಎಂದು ಬೇಷರತ್‌ ಮುಚ್ಚಳಿಕೆ ಪತ್ರ ಬೆದುಕೊಟ್ಟರು. ‘ಇನ್ನು ಮುಂದೆ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಲ್ಲ. ನ್ಯಾಯಾಂಗದಲ್ಲಿ ವಿಶ್ವಾಸವಿದೆ’ ಎಂದೂ ಹೇಳಿ 50 ಸಾವಿರ ರು. ಬಾಂಡ್‌ ಕೂಡ ಬರೆದುಕೊಟ್ಟರು.

ನಿರ್ಬಂಧ ಉಲ್ಲಂಘಿಸಿದ ಆರೋಪ

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವಾಗ ನಿರ್ಬಂಧ ಉಲ್ಲಂಘಿಸಿದ ಆರೋಪದ ಮೇಲೆ, ಅ.13 ರಂದು ಈ ಇಬ್ಬರನ್ನು ಬಂಧಿಸಲಾಗಿತ್ತು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಬುಧವಾರ ಬೆಳಗ್ಗಯಷ್ಟೆ ದೆಹಲಿ ಹೈಕೋರ್ಟ್ ದಾಸ್ ಮತ್ತು ರಾಂಕಾ ಅವರ ನ್ಯಾಯಾಂಗ ಬಂಧನದ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತ್ತು. ಮ್ಯಾಜಿಸ್ಟ್ರೇಟ್‌ ಆದೇಶ ನೋಡಿಕೊಂಡು ಹೈಕೋರ್ಟ್‌ಗೆ ಬರಲು ಹೇಳಿತ್ತು.