ನವದೆಹಲಿಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಚಾತುರ್ಮಾಸ ವ್ರತ ನಡೆಸುತ್ತಿರುವ ವೇದವ್ಯಾಸ ಗುರುಕುಲಕ್ಕೆ ಗುರುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭೇಟಿ ನೀಡಿದರು. ಅವರೊಂದಿಗೆ ಸಂಘದ ಹಿರಿಯ ಪ್ರಚಾರಕರಾದ ಕೃಷ್ಣಗೋಪಾಲ್ ಇದ್ದರು.

ಉಡುಪಿ: ನವದೆಹಲಿಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಚಾತುರ್ಮಾಸ ವ್ರತ ನಡೆಸುತ್ತಿರುವ ವೇದವ್ಯಾಸ ಗುರುಕುಲಕ್ಕೆ ಗುರುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭೇಟಿ ನೀಡಿದರು. ಅವರೊಂದಿಗೆ ಸಂಘದ ಹಿರಿಯ ಪ್ರಚಾರಕರಾದ ಕೃಷ್ಣಗೋಪಾಲ್ ಇದ್ದರು.

ಈ ಸಂದರ್ಭ ಅವರು ಗುರುಕುಲದ ಮಕ್ಕಳ ಬೆಳಿಗ್ಗಿನ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಶುಭ ಸಂದೇಶದ ಮೂಲಕ ಮಕ್ಕಳಿಗೆ ಸತ್ಪ್ರೇರಣೆ ನೀಡಿದರು ಮತ್ತು ಎಲ್ಲ ಮಕ್ಕಳಿಗೂ ಫಲ ವಿತರಿಸಿದರು. ಇಬ್ಬರನ್ನೂ ಸ್ವಾಮೀಜಿ ಸನ್ಮಾನಿಸಿದರು.