ನಗರದಲ್ಲಿ ನ.16 ಮತ್ತು 17ರಂದು ಚಳಿ ತೀವ್ರಗೊಳ್ಳಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಪ್ರಸಕ್ತ ಸಾಲಿನ ಚಳಿಗಾಲದಲ್ಲಿ ಕನಿಷ್ಠ ತಾಪಮಾನ ನ.13ರಂದು 16.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು

ಬೆಂಗಳೂರು : ನಗರದಲ್ಲಿ ನ.16 ಮತ್ತು 17ರಂದು ಚಳಿ ತೀವ್ರಗೊಳ್ಳಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ನ.16 ಮತ್ತು 17 ರಂದು ನಗರ ಮತ್ತು ಗ್ರಾಮಾಂತರದಲ್ಲಿ ಕನಿಷ್ಠ ತಾಪಮಾನ

ಪ್ರಸಕ್ತ ಸಾಲಿನ ಚಳಿಗಾಲದಲ್ಲಿ ಕನಿಷ್ಠ ತಾಪಮಾನ ನ.13ರಂದು 16.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿ ನ.16 ಮತ್ತು 17 ರಂದು ನಗರ ಮತ್ತು ಗ್ರಾಮಾಂತರದಲ್ಲಿ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ. ನಸುಕಿನ ಸಂದರ್ಭದಲ್ಲಿ ಚಳಿ ಹೆಚ್ಚಾಗಿರಲಿದ್ದು, ಮಂಜು ಮುಸುಕಿದ ವಾತಾವರಣ ಇರಲಿದೆ.

ವಾರವಿಡೀ ಕನಿಷ್ಠ ತಾಪಮಾನ

ಇನ್ನು ಈ ವಾರವಿಡೀ ಕನಿಷ್ಠ ತಾಪಮಾನ 18 ರಿಂದ 16 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ. ಗರಿಷ್ಠ ತಾಪಮಾನ ದಿನದ ಅವಧಿಯಲ್ಲಿ 27ರಿಂದ 28 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾನುವಾರವೂ ನಗರ ಮತ್ತು ಗ್ರಾಮಾಂತರದಲ್ಲಿ ಬಹುತೇಕ ಮಂಜು ಮತ್ತು ಮೋಡ ಮುಸುಕಿದ ವಾತಾವರಣವಿದ್ದು, ನಸುಕಿನ ವೇಳೆ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಜಿಕೆವಿಕೆ ಆವರಣದಲ್ಲಿ ಕನಿಷ್ಠ ತಾಪಮಾನ 16.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.