ರಾಷ್ಟ್ರ ರಾಜಧಾನಿಯ ಸತ್ಯ ನಿಕೇತನ ಪ್ರದೇಶದಲ್ಲಿ 5 ಅಂತಸ್ತಿನ ಪುರುಷ ಪಿಜಿ ಕಟ್ಟಡ ಕುಸಿತದಲ್ಲಿ ಮೃತರ ಸಂಖ್ಯೆ 7ಕ್ಕೇರಿಕೆಯಾಗಿದ್ದು, ಅವಶೇಷಗಳಡಿ ಸಿಲುಕಿದ್ದ 12 ಮಂದಿಯನ್ನು ರಕ್ಷಿಸಲಾಗಿದೆ. ಮತ್ತೊಂದೆಡೆ ಪಿಜಿ ಮಾಲೀಕ, ಆತನ ಪತ್ನಿ ಹಾಗೂ ಪುತ್ರನನ್ನು ಬಂಧನವಾಗಿದೆ. ಇದೇ ವೇಳೆ ದೆಹಲಿ ಮಹಾನಗರ ಪಾಲಿಕೆಯ ದಕ್ಷಿಣ ವಲಯ ಉಪ ಆಯುಕ್ತ ರಾಜೇಶ್ ಕುಮಾರ್ ಹಾಗೂ 4 ಎಂಜಿನಿಯರ್‌ಗಳನ್ನು ನಿರ್ಲಕ್ಷ್ಯದ ಆರೋಪ ಹೊರಿಸಿ ಸಸ್ಪೆಂಡ್ ಮಾಡಲಾಗಿದೆ.
- ಇದುವರೆಗೆ 12 ಮಂದಿ ರಕ್ಷಣೆ । ರಕ್ಷಣಾ ಕಾರ್ಯ ಅಂತ್ಯ
- ಪಿಜಿ ಮಾಲೀಕ. ಪತ್ನಿ, ಪುತ್ರ ಬಂಧನ । ಐದು ಅಧಿಕಾರಿಗಳ ಸಸ್ಪೆಂಡ್- ಘಟನೆಗೆ ದಿಲ್ಲಿ ಪಾಲಿಕೆ, ದಿಲ್ಲಿ ವಿವಿ ಕೂಡ ಕಾರಣ: ಹೈಕೋರ್ಟ್ ಕಿಡಿ
ಪಿಟಿಐ ನವದೆಹಲಿರಾಷ್ಟ್ರ ರಾಜಧಾನಿಯ ಸತ್ಯ ನಿಕೇತನ ಪ್ರದೇಶದಲ್ಲಿ 5 ಅಂತಸ್ತಿನ ಪುರುಷ ಪಿಜಿ ಕಟ್ಟಡ ಕುಸಿತದಲ್ಲಿ ಮೃತರ ಸಂಖ್ಯೆ 7ಕ್ಕೇರಿಕೆಯಾಗಿದ್ದು, ಅವಶೇಷಗಳಡಿ ಸಿಲುಕಿದ್ದ 12 ಮಂದಿಯನ್ನು ರಕ್ಷಿಸಲಾಗಿದೆ. ಮತ್ತೊಂದೆಡೆ ಪಿಜಿ ಮಾಲೀಕ, ಆತನ ಪತ್ನಿ ಹಾಗೂ ಪುತ್ರನನ್ನು ಬಂಧನವಾಗಿದೆ. ಇದೇ ವೇಳೆ ದೆಹಲಿ ಮಹಾನಗರ ಪಾಲಿಕೆಯ ದಕ್ಷಿಣ ವಲಯ ಉಪ ಆಯುಕ್ತ ರಾಜೇಶ್ ಕುಮಾರ್ ಹಾಗೂ 4 ಎಂಜಿನಿಯರ್‌ಗಳನ್ನು ನಿರ್ಲಕ್ಷ್ಯದ ಆರೋಪ ಹೊರಿಸಿ ಸಸ್ಪೆಂಡ್ ಮಾಡಲಾಗಿದೆ.ಘಟನೆ ನಡೆದ ಎರಡನೇ ದಿನವೂ ರಕ್ಷಣಾ ಕಾರ್ಯ ಮುಂದುವರೆದಿದ್ದು 30 ವರ್ಷ ಹಳೆಯ ಕಟ್ಟಡದ ಶೇ.80ರಷ್ಟು ಅವಶೇಷಗಳನ್ನು ರಕ್ಷಣಾ ಸಿಬ್ಬಂದಿ ತೆರವುಗೊಳಿಸಿದ್ದಾರೆ, ಅವಘಡದಲ್ಲಿ ಇದುವರೆಗೆ 75 ವರ್ಷದ ವೃದ್ಧ ಸೇರಿದಂತೆ 7 ಜನರು ಸಾವನ್ನಪ್ಪಿದ್ದರೆ. 12 ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೋಧ ಕಾರ್ಯ ಅಂತ್ಯವಾಗಿದ್ದು, ಅವಶೇಷದ ಅಡಿ ಯಾರೂ ಇಲ್ಲ ಎಂದು ಭಾವಿಸಲಾಗಿದೆ.
ನೆಲ ಮಹಡಿಯಲ್ಲಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಮಳೆ ನೀರು ತುಂಬಿತ್ತು. ಈ ವ ಏಳೆ ಕಟ್ಟಡ ದುರ್ಬಲಗೊಂಡು ದುರಂತ ಸಂಭವಿಸರಬಹುದು ಅಂತಲೂ ಹೇಳಲಾಗುತ್ತಿದೆ.5 ಅಂತಸ್ತಿನ ಕಟ್ಟಡಗಳು ಸೀಲ್:
ಈ ಘಟನೆ ಬೆನ್ನಲ್ಲೇ, ಸುರಕ್ಷತಾ ತಪಾಸಣೆ ಉದ್ದೇಶದಿಂದ ನಗರದಲ್ಲಿರುವ ಎಲ್ಲಾ 5 ಅಂತಸ್ತಿನ ಕಟ್ಟಡಗಳನ್ನು ಸೀಲ್ ಮಾಡುವಂತೆ ಸಿಎಂ ರೇಖಾ ಗುಪ್ತಾ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಜತೆಗೆ ಪ್ರಕರಣದ ಮ್ಯಾಜಿಸ್ಟೀರಿಯಲ್ ತನಿಖೆ ಹಾಗೂ ಕಟ್ಟಡ ಮಾಲೀಕರ ವಿರುದ್ಧ ಎಫ್‌ಐಆರ್‌ಗೆ ಸೂಚಿಸಿದ್ದಾರೆ.ಮಾಲೀಕನ ಬಂಧನ:
ದುರಂತದ ಬಳಿಕ ತಲೆ ಮರೆಸಿಕೊಂಡಿದ್ದ ಪಿಜಿ ಮಾಲೀಕ ಹರಿರಾಮ್‌ನನ್ನು ದೆಹಲಿ ಪೊಲೀಸರು ರಾಜಸ್ಥಾನದ ಭಿವಾಡಿ ಎಂಬಲ್ಲಿ ಮಧ್ಯಾಹ್ನ ಬಂಧಿಸಿದ್ದಾರೆ. ಬಳಿಕ ಆತನ ಹೆಂಡತಿ ಹಾಗೂ ಮಗನನ್ನು ಬಂಧಿಸಲಾಗಿದೆ. ಅವರ ಮೇಲೆ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ಹಾಕಲಾಗಿದೆ. ಬೆಳಗ್ಗೆ ಹರಿರಾಂ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಲಾಗಿತ್ತು.
ಉನ್ನತ ತನಿಖೆಗೆ ಹೈಕೋರ್ಟ್ ಆದೇಶ :ಸತ್ಯ ನಿಕೇತನ ನಗರದಲ್ಲಿ ನಡೆದ ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಜತೆಗೆ ನಗರದಾದ್ಯಂತ ಇರುವ ಹಾಸ್ಟೆಲ್ ಹಾಗೂ ಪಿಜಿ ಸೌಲಭ್ಯಗಳ ವಿವರಗಳನ್ನೂ ಕೇಳಿದೆ. ಇಂಥ ದುರಂತಗಳಿಗೆ ಮಹಾನಗರ ಪಾಲಿಕೆ ಹಾಗೂ ದಿಲ್ಲಿ ವಿವಿ ಕೂಡ ಕಾರಣ. ದಿಲ್ಲಿ ವಿವಿ, ತನ್ನ ಆವರಣದಲ್ಲೇ ವಿದ್ಯಾರ್ಥಿಗಳಿಗೆ ಸೂಕ್ತ ಹಾಸ್ಟೆಲ್ ಸೌಲಭ್ಯ ನೀಡಿದ್ದರೆ ಅವರು ಇಲ್ಲಿ ಇರುವ ಸ್ಥಿತಿ ಬರುತ್ತಿರಲಿಲ್ಲ ಎಂದು ಚಾಟಿ ಬೀಸಿದೆ.
--ದಿಲ್ಲಿ ಪಿಜಿ ಕುಸಿತ: ಸಾವಿಗೆಮಾಲೀಕ ಹೊಣೆಯಲ್ಲ ಎಂಬಬಾಡಿಗೆ ಒಪ್ಪಂದ ಬೆಳಕಿಗೆನವದೆಹಲಿ: ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಭಾನುವಾರ 7 ವಿದ್ಯಾರ್ಥಿಗಳನ್ನು ಬಲಿಪಡೆದ ಪಿಜಿ ಕಟ್ಟಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ, ಪಿಜಿಯ ಬಾಡಿಗೆ ಒಪ್ಪಂದವು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕುಸಿದುಬಿದ್ದ ಈ ಕಟ್ಟಡದ ಒಪ್ಪಂದದಲ್ಲಿ, ವಾಸಿಸುವವರ ಸುರಕ್ಷತೆಗೆ ಅಥವಾ ಯಾವುದೇ ಪ್ರಾಣಹಾನಿಗೆ ಪಿಜಿ ಆಡಳಿತ ಮಂಡಳಿ ಅಥವಾ ಮಾಲೀಕರು ಜವಾಬ್ದಾರರಲ್ಲ ಎಂಬ ವಿವಾದಾತ್ಮಕ ಷರತ್ತು ಇರುವುದು ಬೆಳಕಿಗೆ ಬಂದಿದೆ. ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅಕ್ರಮ ನಿರ್ಮಾಣ ಮತ್ತು ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕುರಿತು ತನಿಖೆ ನಡೆಯುತ್ತಿದೆ.