ಪಶ್ಚಿಮ ಘಟ್ಟದ ಅಂಚಿನಲ್ಲಿ ಇರುವ ಮಲೆನಾಡು ಮತ್ತು ಕರಾವಳಿ ಪ್ರದೇಶದ ಜನಜೀವನಕ್ಕೆ ಮಾರಕವಾಗುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ನಿಯೋಗವು ಜಿಲ್ಲೆಯ ನಿಯೋಗದೊಂದಿಗೆ ಸೆ. ೩ನೇ ವಾರ ದಿಲ್ಲಿ ಚಲೋ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಶಿರಸಿ
ಪಶ್ಚಿಮ ಘಟ್ಟದ ಅಂಚಿನಲ್ಲಿ ಇರುವ ಮಲೆನಾಡು ಮತ್ತು ಕರಾವಳಿ ಪ್ರದೇಶದ ಜನಜೀವನಕ್ಕೆ ಮಾರಕವಾಗುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ನಿಯೋಗವು ಜಿಲ್ಲೆಯ ನಿಯೋಗದೊಂದಿಗೆ ಸೆ. ೩ನೇ ವಾರ ದಿಲ್ಲಿ ಚಲೋ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.ತಾಲೂಕಿನ ಬಂಡಲ್, ಮಂಜುಗುಣಿ, ದೇವನಳ್ಳಿ ಮುಂತಾದ ಗ್ರಾಪಂ ವ್ಯಾಪ್ತಿಯಲ್ಲಿ ಜರುಗಿದ ಕಸ್ತೂರಿ ರಂಗನ್ ವರದಿ ವಿರೋಧಿ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಜನಜೀವನ ಮತ್ತು ವಾಸ್ತವಿಕತೆಯಿಂದ ವಿವಿಧ ರೀತಿಯ ಭೌಗೋಳಿಕ ಹಿನ್ನೆಲೆಗಳಿಗೆ ಹೊಂದಿಕೊಂಡಿರುವ ಜನ ವ್ಯವಸ್ಥೆಯ ಮೇಲೆ ಸೂಕ್ಷ್ಮ ಪ್ರದೇಶವೆಂದು ಘೋಶಿಸುವುದರಿಂದ ಗಂಭೀರ ಪರಿಣಾಮ ಬೀರುವುದರಿಂದ ರಾಜ್ಯ ಸರ್ಕಾರವು ಸಮರ್ಪಕವಾಗಿ ಈ ವರದಿ ಜಾರಿಯಾಗದಂತೆ ಕೇಂದ್ರ ಸರ್ಕಾರದ ಪರಿಸರ ಇಲಾಖೆಗೆದಾಅಕ್ಷೇಪಣೆ ಸಲ್ಲಿಸುವುದು ಅವಶ್ಯ ಎಂದು ಹೇಳಿದರು.ಪಶ್ಚಿಮ ಘಟ್ಟದ ಒಟ್ಟು ಪ್ರದೇಶದಲ್ಲಿ ಶೇ. ೯೦ರಷ್ಟು ಪ್ರದೇಶವು ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದರಿಂದ ಹಾಗೂ ಜನ ಜೀವನ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರ ಬಹುದಾಗಿರುವುದರಿಂದ ಗಂಭೀರ ಹೋರಾಟ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜ ಮರಾಠಿ, ಹೋರಾಗಾರರ ವೇದಿಕೆಯ ಸಂಚಾಲಕ ಕಿರಣ ಮರಾಠಿ ದೇವನಳ್ಳಿ, ತಾಲೂಕಾ ಸಂಚಾಲಕರಾದ ಚಂದ್ರಶೇಖರ ಶಾನಭಾಗ, ಯಶವಂತ ನಾಯ್ಕ, ಹರೀಶ್, ಬಾಬು ಮರಾಠಿ, ನಾರಾಯಣ ಶಾನಬಾಗ, ಲಕ್ಷ್ಮಣ ಮರಾಠಿ, ಬಂಗಾರಿ ಮರಾಠಿ, ಈಶ್ವರ ಮರಾಠಿ, ಸದಾನಂದ ಉಪಸ್ಥಿತರಿದ್ದರು.ಸೆ.೫ ಆಕ್ಷೇಪಣಾ ಪತ್ರ ಸಲ್ಲಿಕೆ:
ಕಸ್ತೂರಿ ರಂಗನ್ ವರದಿ ವಿರೋಧಿಸಿ ಘಟ್ಟದ ಮೇಲಿನ ತಾಲೂಕುಗಳಿಂದ ಶಿರಸಿಯಲ್ಲಿ ಸೆ. ೫ ರಂದು ಬೃಹತ್ ರ‍್ಯಾಲಿ ಮತ್ತು ಆಕ್ಷೇಪ ಪತ್ರ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಕಿರಣ ಮರಾಠಿ ದೇವನಳ್ಳಿ ಹೇಳಿದರು.