ಕೇಜ್ರಿವಾಲ್‌ಗೆ ಜಾಮೀನು: ಇಂದು ಬಿಡುಗಡೆ

| Published : Jun 21 2024, 01:01 AM IST / Updated: Jun 21 2024, 05:11 AM IST

Aravind Kejriwal

ಸಾರಾಂಶ

ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ವಿಶೇಷ ನ್ಯಾಯಾಲಯವು ಆಪ್‌ ನೇತಾರ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಗುರುವಾರ ರಾತ್ರಿ ಜಾಮೀನು ನೀಡಿದೆ.

 ನವದೆಹಲಿ :  ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ವಿಶೇಷ ನ್ಯಾಯಾಲಯವು ಆಪ್‌ ನೇತಾರ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಗುರುವಾರ ರಾತ್ರಿ ಜಾಮೀನು ನೀಡಿದೆ. ಶುಕ್ರವಾರ ಅವರು ತಿಹಾರ್‌ ಜೈಲಿಂದ ಬಿಡುಗಡೆ ಹೊಂದಲಿದ್ದಾರೆ.

ವಿಶೇಷ ನ್ಯಾಯಾಧೀಶ ನಿಯಾಯ್ ಬಿಂದು ಅವರು ಕೇಜ್ರಿವಾಲ್‌ ಅವರಿಗೆ ₹1 ಲಕ್ಷ ವೈಯಕ್ತಿಕ ಬಾಂಡ್‌ ಪಡೆದು ಜಾಮೀನು ನೀಡಿದರು. ಇದೇ ವೇಳೆ, ಈ ಆದೇಶಕ್ಕೆ 48 ಗಂಟೆಗಳ ಕಾಲ ತಡೆ ನೀಡಬೇಕೆಂಬ ಜಾರಿ ನಿರ್ದೇಶನಾಲಯದ (ಇ.ಡಿ.) ಮನವಿ ತಿರಸ್ಕರಿಸಿದರು.

ಈ ಹಿಂದೆ ಲೋಕಸಭೆ ಚುನಾವಣೆ ವೇಳೆ ಪ್ರಚಾರಕ್ಕೆಂದು ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ 2 ವಾರ ಮಧ್ಯಂತರ ಜಾಮೀನು ನೀಡಿತ್ತು. ಬಳಿಕ ಅವರಿಗೆ ನಿಯಮಿತ ಜಾಮೀನು ಕೋರಿ ಸ್ಥಳೀಯ ಕೋರ್ಟ್‌ಗೆ ಹೋಗಲು ಸೂಚನೆ ನೀಡಿತ್ತು. ಆ ಪ್ರಕಾರ ಕೇಜ್ರಿವಾಲ್ ಇ.ಡಿ. ವಿಶೇಷ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು.