ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಹಿನ್ನೆಲೆ: ಎಂಜಿನಿಯರ್ ರಶೀದ್‌ಗೆ ಮಧ್ಯಂತರ ಜಾಮೀನು

| Published : Sep 11 2024, 01:03 AM IST / Updated: Sep 11 2024, 05:42 AM IST

ಸಾರಾಂಶ

ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಬಂಧಿತರಾಗಿರುವ ಶೇಖ್‌ ಅಬ್ದುಲ್‌ ರಶೀದ್‌ಗೆ ದಿಲ್ಲಿ ಕೋರ್ಟ್‌ ಅ.2ರ ವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಅವರು ಪಾಲ್ಗೊಳ್ಳುವ ಸಾಧ್ಯತೆ ಇದೆ.

ನವದೆಹಲಿ: ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಬಂಧಿತರಾಗಿರುವ ಕಾಶ್ಮೀರದ ಲೋಕಸಭಾ ಸದಸ್ಯ ಶೇಖ್‌ ಅಬ್ದುಲ್‌ ರಶೀದ್‌ಗೆ (ಎಂಜಿನಿಯರ್ ರಶೀದ್) ಮಂಗಳವಾರ ದಿಲ್ಲಿ ಕೋರ್ಟ್‌ ಅ.2ರ ವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಜಮ್ಮು-ಕಾಶ್ಮೀರದಲ್ಲಿ ಸೆ.18ರಿಂದ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಅವರು ತಮ್ಮ ಆಪ್ತರ ಪರ ಪ್ರಚಾರ ಮಾಡುವ ಸಾಧ್ಯತೆಗಳಿವೆ.

2017ರ ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ರಶೀದ್‌ರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು. 2019ರಿಂದಲೂ ಜೈಲಿನಲ್ಲಿದ್ದಾರೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಶೀದ್‌ ಅವರು ಬಾರಾಮುಲ್ಲಾದಲ್ಲಿ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ ಅವರನ್ನು ಸೋಲಿಸಿದ್ದರು. ಜು. 5 ರಂದು ಪ್ರಮಾಣವಚನ ಸ್ವೀಕಾರಕ್ಕೆ ಕೋರ್ಟ್‌ 1 ದಿನದ ಪೆರೋಲ್‌ ನೀಡಿತ್ತು.