ಸಾರಾಂಶ
ನವದೆಹಲಿ: ಹಿಂದಿನ ಆಪ್ ಸರ್ಕಾರದ ವಿವಾದಾತ್ಮಕ ಅಬಕಾರಿ ನೀತಿಯಿಂದ ರಾಜ್ಯದ ಬೊಕ್ಕಸಕ್ಕೆ 2021-22ನೇ ಸಾಲಿನಲ್ಲಿ ಸರಿಸುಮಾರು 2 ಸಾವಿರ ಕೋಟಿ ರು. ನಷ್ಟವಾಗಿದೆ ಎಂದು ದೆಹಲಿಯ ಬಿಜೆಪಿ ಸರ್ಕಾರ ಮಂಗಳವಾರ ದೆಹಲಿ ವಿಧಾನಸಭೆಯಲ್ಲಿ ಮಂಡಿಸಿದ ಮಹಾಲೇಖಪಾಲರ(ಸಿಎಜಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಕೂಡಲೇ ಆಪ್ ಸರ್ಕಾರದ ಅಬಕಾರಿ ಪರವಾನಗಿ ಹಗರಣದ ಕುರಿತ ಸಿಎಜಿ ವರದಿಯನ್ನು ಮೊದಲ ವಿಧಾನಸಭೆ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಪಕ್ಷದ ಮುಖಂಡರು ಘೋಷಿಸಿದ್ದರು. ಅದರಂತೆ ಇದೀಗ ಆ ವರದಿಯನ್ನು ಮಂಡಿಸಲಾಗಿದೆ.ವರದಿ ಪ್ರಕಾರ, ಕೆಲವು ವಾರ್ಡ್‌ಗಳಲ್ಲಿ ಸರಿಯಾಗಿದ ಸಮಯಕ್ಕೆ ಮದ್ಯದಂಗಡಿ ಪರವಾನಗಿ ಪಡೆಯುವಲ್ಲಿ ಆದ ವಿಳಂಬದಿಂದಾಗಿ 941.53 ಕೋಟಿ ನಷ್ಟ ಉಂಟಾಗಿದೆ. ಇದಲ್ಲದೆ ಸರೆಂಡರ್ ಮಾಡಿದ ಲೈಸನ್ಸ್‌ಗಳಿಗೆ ಮರುಟೆಂಡರ್ ಕರೆಯುವಲ್ಲಿ ಆದ ವಿಳಂಬದಿಂದಾಗಿ 890.15 ಕೋಟಿ ರು. ಹಾಗೂ ಕೋವಿಡ್ ವೇಳೆ ಮದ್ಯದಂಗಡಿಗಳಿಗೆ ಆದ ನಷ್ಟಕ್ಕೆ ನೀಡಿದ ಪರಿಹಾರ ಕ್ರಮಗಳಲ್ಲಿನ ಲೋಪಗಳಿಂದಾಗಿ ಸರ್ಕಾರದ ಬೊಕ್ಕಸಕ್ಕೆ144 ಕೋಟಿ ರು. ನಷ್ಟ ಆಗಿದೆ ಎಂದು ಹೇಳಲಾಗಿದೆ.
ಅನೇಕ ಉಲ್ಲಂಘನೆ:''''''''ದೆಹಲಿಯಲ್ಲಿ ಅಬಕಾರಿ ಪೂಕೈಕೆ ಮತ್ತು ನಿಯಂತ್ರಣ ಕುರಿತ ಸಾಧನಾ ಲೆಕ್ಕಪರಿಶೋಧನೆ'''''''' ಹೆಸರಿನ ಈ ವರದಿ, ಅಬಕಾರಿ ನೀತಿಯಲ್ಲಿ ಸಾಕಷ್ಟು ಲೋಪದೋಷಗಳಾಗಿರುವುದನ್ನು ಎತ್ತಿತೋರಿಸಿದೆ. ಪರವಾನಗಿ, ಗುಣಮಟ್ಟ ಪರಿಶೀಲನೆ, ಬೆಲೆ ನಿರ್ಧಾರ, ನಿಯಂತ್ರಣದಲ್ಲಿ ಅನೇಕ ಉಲ್ಲಂಘನೆಗಳು ಆಗಿತ್ತು. ಅಬಕಾರಿ ಗುತ್ತಿಗೆ ಹಂಚಿಕೆಗೆ ಸಂಬಂಧಿಸಿ ಸಕ್ಷಮ ಪ್ರಾಧಿಕಾರದ ಒಪ್ಪಿಗೆ ಪಡೆಯದೆ ಹಲವು ನಿರ್ಧಾರಗಳನ್ನು ಸರ್ಕಾರ ಕೈಗೊಂಡಿತ್ತು. ಈ ಲೋಪದೋಷಗಳಿಗೆ ಉತ್ತದಾಯಿತ್ವ ಗುರುತಿಸುವ ಅಗತ್ಯವಿದೆ ಎಂದು ವರದಿ ಹೇಳಿದೆ.
ಅಬಕಾರಿ ನೀತಿಯಲ್ಲಿ ಬದಲಾವಣೆ ಕುರಿತು ನೇಮಿಸಲಾಗಿದ್ದ ತಜ್ಞರ ಸಮಿತಿ ಶಿಫಾರಸ್ಸುಗಳನ್ನು ಆಗಿನ ಡಿಸಿಎಂ ಮನಿಷ್ ಸಿಸೋಡಿಯಾ ನಿರ್ಲಕ್ಷ್ಯಿಸಿದ್ದರು ಎಂದೂ ವರದಿಯಲ್ಲಿ ತಿಳಿಸಲಾಗಿದೆ.ಇದು ಸುಳ್ಳು- ಆಪ್:
ವರದಿಯನ್ನು ಸುಳ್ಳು ಎಂದು ಆಪ್ ತಳ್ಳಿಹಾಕಿದೆ ಹಾಗೂ ಹಿಂದಿನ ಸರ್ಕಾರದ ನೀತಿಗಳು ಹಾನಿಗೆ ಕಾರಣ ಎಂದಿದೆ.