ಸಾರಾಂಶ
ಕಳೆದ ವಾರ ಕೆಂಪುಕೋಟೆಯಲ್ಲಿ ಜೈನ ಸಮುದಾಯದ ಕಾರ್ಯಕ್ರಮ ನಡೆವ ವೇಳೆ ಕೋಟಿ ರು. ಮೌಲ್ಯದ ಚಿನ್ನದ ಕಳಶವನ್ನು ಕದ್ದಿದ್ದ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. 760 ಗ್ರಾಂ ಚಿನ್ನ, 150 ಗ್ರಾಂ ವಜ್ರ, ರತ್ನಗಳಿಂದ ಮಾಡಲ್ಪಟ್ಟ 1 ಕೋಟಿ ರು. ಮೌಲ್ಯದ ಕಳಶವನ್ನು ಪೊಲೀಸರು ಮರುವಶಪಡಿಸಿಕೊಂಡಿದ್ದಾರೆ.
ನವದೆಹಲಿ: ಕಳೆದ ವಾರ ಕೆಂಪುಕೋಟೆಯಲ್ಲಿ ಜೈನ ಸಮುದಾಯದ ಕಾರ್ಯಕ್ರಮ ನಡೆವ ವೇಳೆ ಕೋಟಿ ರು. ಮೌಲ್ಯದ ಚಿನ್ನದ ಕಳಶವನ್ನು ಕದ್ದಿದ್ದ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. 760 ಗ್ರಾಂ ಚಿನ್ನ, 150 ಗ್ರಾಂ ವಜ್ರ, ರತ್ನಗಳಿಂದ ಮಾಡಲ್ಪಟ್ಟ 1 ಕೋಟಿ ರು. ಮೌಲ್ಯದ ಕಳಶವನ್ನು ಪೊಲೀಸರು ಮರುವಶಪಡಿಸಿಕೊಂಡಿದ್ದಾರೆ.
ಬಂಧಿತ ಭೂಷಣ್ ವರ್ಮಾ ಉತ್ತರ ಪ್ರದೇಶದ ಹಾಪುರ್ ಮೂಲದವನಾಗಿದ್ದು, ಈ ಹಿಂದೆ ಹಲವು ಬಾರಿ ಕೆಂಪುಕೋಟೆಗೆ ಬಂದು ಸ್ಥಳಾನ್ವೇಷಣೆ ನಡೆಸಿದ್ದ. ಸೆ.3ರಂದು ಎಲ್ಲರೂ ಸ್ಪೀಕರ್ ಓಂ ಬಿರ್ಲಾ ಅವರನ್ನು ಸ್ವಾಗತಿಸುತ್ತಿದ್ದಾಗ, ಈತ ಕಳಶವನ್ನು ಕದ್ದು ಪರಾರಿಯಾಗಿದ್ದ. ತನಿಖೆ ಆರಂಭಿಸಿದ ಪೊಲೀಸರು ಭೂಷಣ್‌ನನ್ನು ಬಂಧಿಸಿದ್ದಾರೆ.