ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಖಲಿಸ್ತಾನಿ ಮತ್ತು ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆಗಳ ದಾಳಿ ಬೆದರಿಕೆ ಇದ್ದು, ದೆಹಲಿ ಸೇರಿ ದೇಶಾದ್ಯಂತ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
- ಗುಪ್ತಚರ ಇಲಾಖೆಯಿಂದ ಎಚ್ಚರಿಕೆನವದೆಹಲಿ: ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಖಲಿಸ್ತಾನಿ ಮತ್ತು ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆಗಳ ದಾಳಿ ಬೆದರಿಕೆ ಇದ್ದು, ದೆಹಲಿ ಸೇರಿ ದೇಶಾದ್ಯಂತ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಪಂಜಾಬ್ ಮೂಲದ ಗ್ಯಾಂಗ್‌ಸ್ಟರ್‌ಗಳು, ಖಲಿಸ್ತಾನಿ ಉಗ್ರರು ಮತ್ತು ವಿದೇಶದಲ್ಲಿ ಕುಳಿತ ಮೂಲಭೂತವಾದಿಗಳ ಕಾಲಾಳುಗಳ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಗ್ಯಾಂಗ್‌ಸ್ಟರ್‌ಗಳು ಹರ್ಯಾಣ, ದೆಹಲಿ-ಎನ್‌ಸಿಆರ್, ಉತ್ತರಪ್ರದೇಶ ಮತ್ತು ರಾಜಸ್ಥಾನದಲ್ಲಿ ಹೆಚ್ಚು ಚಟುವಟಿಕೆಯಿಂದಿದ್ದಾರೆ. ಈಗಾಗಲೇ ಅವರು ಖಲಿಸ್ತಾನಿ ಉಗ್ರರೊಂದಿಗೆ ಸಂಪರ್ಕವನ್ನೂ ಸಾಧಿಸಿದ್ದಾರೆ. ಈ ಗ್ಯಾಂಗ್‌ಸ್ಟರ್‌ಗಳನ್ನು ಬಳಸಿಕೊಂಡು ದೆಹಲಿ ಸೇರಿ ದೇಶದ ಇತರೆ ನಗರಗಳಲ್ಲಿ ಅಹಿತಕರ ಘಟನೆ ನಡೆಸುವ ಆತಂಕವಿದೆ. ಹೀಗಾಗಿ ಹೆಚ್ಚು ಎಚ್ಚರಿಕೆಯಿಂದಿರುವಂತೆ ಗುಪ್ತಚರ ಮೂಲಗಳು ತಿಳಿಸಿವೆ.