ಸಾರಾಂಶ
ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಪ್ ಮತ್ತು ಕಾಂಗ್ರೆಸ್ ಪಕ್ಷಗಳು ಪೈಪೋಟಿಗೆ ಬಿದ್ದು ಉಚಿತಗಳನ್ನು ಘೋಷಿಸುತ್ತಿದ್ದರೆ, ಇದೀಗ ಬಿಜೆಪಿ ಕೂಡ ಉಚಿತ ವಿದ್ಯುತ್ ಸೇರಿ ಹಲವು ಉಚಿತಗಳ ಘೋಷಣೆಗೆ ಸಜ್ಜಾಗಿದೆ ಎಂದು ಮೂಲಗಳು ಹೇಳಿವೆ.
ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಪ್ ಮತ್ತು ಕಾಂಗ್ರೆಸ್ ಪಕ್ಷಗಳು ಪೈಪೋಟಿಗೆ ಬಿದ್ದು ಉಚಿತಗಳನ್ನು ಘೋಷಿಸುತ್ತಿದ್ದರೆ, ಇದೀಗ ಬಿಜೆಪಿ ಕೂಡ ಉಚಿತ ವಿದ್ಯುತ್ ಸೇರಿ ಹಲವು ಉಚಿತಗಳ ಘೋಷಣೆಗೆ ಸಜ್ಜಾಗಿದೆ ಎಂದು ಮೂಲಗಳು ಹೇಳಿವೆ.
ಬಿಜೆಪಿಯೇನಾದರೂ ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ದೇಗುಲಗಳು ಮತ್ತು ಗುರುದ್ವಾರಗಳಿಗೆ 500 ಯುನಿಟ್, ಮನೆಗಳಿಗೆ 300 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಕರ್ನಾಟಕದ ಗೃಹಲಕ್ಷ್ಮಿ ಯೋಜನೆ ರೀತಿ ಮಾಸಿಕ 2500 ರು. ನೀಡುವ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.ಆಮ್ ಆದ್ಮಿ ಪಕ್ಷವು ಈಗಾಗಲೇ ದೆಹಲಿಯಲ್ಲಿ ಪ್ರತಿ ಮನೆಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿದೆ. ಜತೆಗೆ ಹಿಂದೂ ಹಾಗೂ ಸಿಖ್ ಅರ್ಚಕರಿಗೆ ಪ್ರತಿ ತಿಂಗಳು 18 ಸಾವಿರ ರು. ನೀಡುವುದಾಗಿ ಆಪ್ ಮುಖಂಡ ಅರವಿಂದ ಕೇಜ್ರಿವಾಲ್ ಅವರು ಈಗಾಗಲೇ ಘೋಷಿಸಿದ್ದಾರೆ.