ಸಾರಾಂಶ
ದೆಹಲಿ ವಿಧಾನಸಭೆಯ 70 ಸ್ಥಾನಗಳಿಗೆ ಬುಧವಾರ ಶಾಂತಿಯುತ ಮತದಾನ ನಡೆದಿದ್ದು, ಶೇ.60 ರಷ್ಟು ಮತ ಚಲಾವಣೆಯಾಗಿದೆ. ಮತದಾನ ಪೂರ್ಣ ಶಾಂತಿಯುತವಾಗಿ ನಡೆದಿದ್ದು, ರಾಜ್ಯದ ಮುಂದಿನ ಚುಕ್ಕಾಣಿ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ರಾಜಧಾನಿಯ ಮತದಾರರು ತಮ್ಮ ನಿರ್ಧಾರ
ನವದೆಹಲಿ: ದೆಹಲಿ ವಿಧಾನಸಭೆಯ 70 ಸ್ಥಾನಗಳಿಗೆ ಬುಧವಾರ ಶಾಂತಿಯುತ ಮತದಾನ ನಡೆದಿದ್ದು, ಶೇ.00 ರಷ್ಟು ಮತ ಚಲಾವಣೆಯಾಗಿದೆ. ಮತದಾನ ಪೂರ್ಣ ಶಾಂತಿಯುತವಾಗಿ ನಡೆದಿದ್ದು, ರಾಜ್ಯದ ಮುಂದಿನ ಚುಕ್ಕಾಣಿ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ರಾಜಧಾನಿಯ ಮತದಾರರು ತಮ್ಮ ನಿರ್ಧಾರವನ್ನು ಇವಿಎಂ ಯಂತ್ರದೊಳಗೆ ದಾಖಲಿಸಿದ್ದಾರೆ. ಫೆ.8ರಂದು ಮತ ಎಣಿಕೆ ನಡೆಯಲಿದೆ.
ಸತತ 10 ವರ್ಷಗಳಿಂದ ಅಧಿಕಾರದಲ್ಲಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್‌ಆದ್ಮಿ ಪಕ್ಷ ಹ್ಯಾಟ್ರಿಕ್ ಕನಸಿನಲ್ಲಿದ್ದರೆ ಬಿಜೆಪಿ 27 ವರ್ಷಗಳ ಬಳಿಕ ಮತ್ತು ಕಾಂಗ್ರೆಸ್ 12 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದೆ.
70 ಸ್ಥಾನಗಳಿಗೆ ಒಟ್ಟು 699 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 1.56 ಕೋಟಿ ಮತದಾರರು ಹಕ್ಕು ಚಲಾವಣೆಯ ಅವಕಾಶ ಪಡೆದಿದ್ದರು. ಬೆಳಗ್ಗೆ 7ಕ್ಕೆ ಆರಂಭವಾದ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಿತು.
ಮತದಾನಕ್ಕೆ ಅಡ್ಡಿ:
ಆಮ್‌ಆದ್ಮಿ ಪಕ್ಷ ಪ್ರಾಬಲ್ಯ ಹೊಂದಿರುವ ಮತಗಟ್ಟೆ ಮತ್ತು ಕ್ಷೇತ್ರಗಳಲ್ಲಿ ಮತದಾನಕ್ಕೆ ಬಿಜೆಪಿ ಅಡ್ಡಿ ಮಾಡಿದೆ ಎಂದು ಹಲವು ಕಡೆ ಆಮ್‌ಆದ್ಮಿ ಪಕ್ಷದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಆರೋಪಿಸಿದರು. ಉಳಿದಂತೆ ಮತದಾನ ಯಾವುದೇ ಹಿಂಸಾಚಾರದ ಘಟನೆಗಳಿಲ್ಲದೇ ಶಾಂತಿಯುತವಾಗಿ ನಡೆಯಿತು.