ತೂಗುತ್ತಿದ್ದ ಕತ್ತಿ ತಲೆಮೇಲೆ ಬಿದ್ದಿದೆ: ಕಿಡಿ
ದೇಶದ ಪ್ರಗತಿಗೆ ಕೊಡುಗೆ ನೀಡಿದ್ದಕ್ಕಿದು ಶಿಕ್ಷೆಆಪತ್ತು ಎದುರಿಸಲು ತಂತ್ರ ರೂಪಿಸಬೇಕಿದೆ: ಕರೆ
ಎಲ್ಲಾ ಪಕ್ಷದ ಸಂಸದರು ಒಗ್ಗೂಡಿ ಪ್ರಜಾಪ್ರಭುತ್ವ ರಕ್ಷಿಸಿಚೆನ್ನೈ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ತಮಿಳುನಾಡಿಗೆ ಭಾರೀ ಅನ್ಯಾಯ ಮಾಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಈ ಮೊದಲೇ ರಾಜ್ಯಾದ್ಯಂತ ಏ.16ರಂದು ಕಪ್ಪು ಬಾವುಟ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ. ಜತೆಗೆ, ನಮ್ಮ ದನಿಗೆ ಕಿವಿಗೊಡದಿದ್ದರೆ ಕೇಂದ್ರ ಭಾರೀ ಬೆಲೆ ತೆರಬೇಕಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.
ಕ್ಷೇತ್ರ ಮರುವಿಂಗಡಣೆಯ ಮಸೂದೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡನೆಗು ಮುನ್ನಾ ದಿನವಾದ ಬುಧವಾರ ಪಕ್ಷದ ಸಂಸದರು ಮತ್ತು ಜಿಲ್ಲಾ ಕಾರ್ಯದರ್ಶಿಗಳ ಸಭೆ ಕರೆದಿದ್ದ ಸ್ಟಾಲಿನ್, ‘ಈ ಅಧಿವೇಶನವು ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳ ವಿರುದ್ಧ ಮಾಡಲಾಗುತ್ತಿರುವ ಐತಿಹಾಸಿಕ ಅನ್ಯಾಯ. ತಲೆಯ ಮೇಲೆ ತೂಗುತ್ತಿದ್ದ ಕತ್ತಿ ಈಗ ಬಿದ್ದುಬಿಟ್ಟಿದೆ. ಭಾರತದ ಪ್ರಗತಿಗಾಗಿ ಕೊಡುಗೆ ನೀಡಿದ್ದಕ್ಕಾಗಿ ನಮ್ಮನ್ನು ಹೀಗೆ ಶಿಕ್ಷಿಸಲಾಗುತ್ತಿದೆ. ಈ ಮೂಲಕ ಬಿಜೆಪಿ ಬೆಂಕಿಯೊಂದಿಗೆ ಆಡುತ್ತಿದೆ. ಈ ಘೋರ ಆಪತ್ತನ್ನು ಎದುರಿಸಲು ತಂತ್ರ ರೂಪಿಸುವ ಅಗತ್ಯವಿದೆ’ ಎಂದು ಕಿಡಿ ಕಾರಿದ್ದಾರೆ. ಇದೇ ವೇಳೆ, ಏ.16ರಂದು ಎಲ್ಲಾ ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದೂ ಘೋಷಿಸಿದ್ದಾರೆ.
ಒಗ್ಗೂಡಲು ಕರೆ:
ಈಗ ಆಗುತ್ತಿರುವ ಅನ್ಯಾಯವು ಪಕ್ಷಗಳಿಗೆ ಸೀಮಿತವಾಗಿಲ್ಲ ಎಂದಿರುವ ಸ್ಟಾಲಿನ್, ‘ನಮ್ಮ ಜನರ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ದೇಶದ ಎಲ್ಲಾ ಪಕ್ಷಗಳ ಎಲ್ಲಾ ಸಂಸದರು ಒಗ್ಗೂಡಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು’ ಎಂದು ಕರೆ ನೀಡಿದ್ದಾರೆ.