ಏರ್ ಪ್ಯೂರಿಫೈಯರ್, ಮಾಸ್ಕ್‌ಗೆ ಹೆಚ್ಚಿದ ಬೇಡಿಕೆ
KannadaprabhaNewsNetwork | Published : Nov 04 2023, 12:30 AM IST / Updated: Nov 04 2023, 12:31 AM IST
ಏರ್ ಪ್ಯೂರಿಫೈಯರ್, ಮಾಸ್ಕ್‌ಗೆ ಹೆಚ್ಚಿದ ಬೇಡಿಕೆ
ಸಾರಾಂಶ
ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಗಂಭೀರ ಮಟ್ಟ ಮುಟ್ಟಿದ ಬೆನ್ನಲ್ಲೇ ಏರ್ ಪ್ಯೂರಿಫೈಯರ್‌ಗಳು ಹಾಗೂ ಮಾಸ್ಕ್‌ಗಳಿಗೆ ಭಾರೀ ಬೇಡಿಕೆ ಕಂಡುಬಂದಿದೆ
ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಗಂಭೀರ ಮಟ್ಟ ಮುಟ್ಟಿದ ಬೆನ್ನಲ್ಲೇ ಏರ್ ಪ್ಯೂರಿಫೈಯರ್‌ಗಳು ಹಾಗೂ ಮಾಸ್ಕ್‌ಗಳಿಗೆ ಭಾರೀ ಬೇಡಿಕೆ ಕಂಡುಬಂದಿದೆ. ಈ ಕುರಿತು ಮಾತನಾಡಿದ ದೆಹಲಿಯ ವ್ಯಾಪಾರಿಯೊಬ್ಬರು, ‘ನಮ್ಮಲ್ಲಿ ಕಳೆದ ಕೆಲ ದಿನಗಳಿಂದ ಏರ್ ಪ್ಯೂರಿಫೈಯರ್‌ಗಳು ಹಾಗೂ ಮಾಸ್ಕ್‌ಗಳ ಬೇಡಿಕೆಯು ಶೇ.20-25ರಷ್ಟು ಹೆಚ್ಚಿದ್ದು, ಜನರು ಅದನ್ನು ಕೊಳ್ಲುವತ್ತ ಆಸಕ್ತಿ ತೋರಿದ್ದಾರೆ ಎಂಬುದನ್ನು ತೋರಿಸುತ್ತದೆ. ಈ ಬೇಡಿಕೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ’ ಎಂದು ತಿಳಿಸಿದರು.