ದೇಶವ್ಯಾಪಿ ಪ್ರಮುಖ 150 ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ನೀರು ಸಂಗ್ರಹದ ಪ್ರಮಾಣ ಕಡಿಮೆ

| Published : Aug 05 2024, 12:30 AM IST / Updated: Aug 05 2024, 05:33 AM IST

ಸಾರಾಂಶ

ದೇಶದಲ್ಲಿ ಈ ವರ್ಷ ಮುಂಗಾರು ಉತ್ತಮವಾಗಿದೆ. ಹೀಗಿದ್ದರೂ ದೇಶದ ಪ್ರಮುಖ 150 ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ನೀರು ಸಂಗ್ರಹದ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಜಲ ಆಯೋಗ ಮಾಹಿತಿ ನೀಡಿದೆ.

ದೆಹಲಿ: ದೇಶದಲ್ಲಿ ಈ ವರ್ಷ ಮುಂಗಾರು ಉತ್ತಮವಾಗಿದೆ. ಹೀಗಿದ್ದರೂ ದೇಶದ ಪ್ರಮುಖ 150 ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ನೀರು ಸಂಗ್ರಹದ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಜಲ ಆಯೋಗ ಮಾಹಿತಿ ನೀಡಿದೆ. ಆದರೆ ಕಳೆದ ದಶಕದ ಸರಾಸರಿಗಿಂತ ಅಧಿಕವಾಗಿದೆ ಎಂದಿದೆ.

ಕೇಂದ್ರ ಜಲ ಆಯೋಗದ ಮಾಹಿತಿ ಅನ್ವಯ ದೇಶದ ಪ್ರಮುಖ 150 ಜಲಾಶಯಗಳಲ್ಲಿ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 178 ಶತಕೋಟಿ ಕ್ಯುಬಿಕ್‌ ಮೀಟರ್‌. ಆದರೆ ಸದ್ಯ ಸಂಗ್ರಹ ಆಗಿರುವುದು 91.49 ಶತಕೋಟಿ ಕ್ಯುಬಿಕ್‌ ಮೀಟರ್‌. ಅಂದರೆ ಸಾಮರ್ಥ್ಯದ ಶೇ.51ರಷ್ಟು ಮಾತ್ರ ಸಂಗ್ರಹವಾಗಿದೆ.

ಆದರೆ ದಕ್ಷಿಣ ಭಾರತದಲ್ಲಿ ಸುಮಾರು 42 ಜಲಾಶಯಗಳಿವೆ. ಇಲ್ಲಿ ಜಲಾಶಯಗಳ ಸಂಗ್ರಹ ಸಾಮರ್ಥ್ಯ 53.334 ಶತಕೋಟಿ ಕ್ಯುಬಿಕ್‌ ಮೀಟರ್‌. ಸದ್ಯ ಇವುಗಳಲ್ಲಿ 35.010 ಶತಕೋಟಿ ಕ್ಯುಬಿಕ್‌ ಮೀಟರ್‌ ನೀರು ಸಂಗ್ರಹವಾಗಿದೆ. ಇದು ಒಟ್ಟು ಸಾಮಾರ್ಥ್ಯದ ಶೇ.66ರಷ್ಟು ಎಂದು ಅಂಕಿ ಅಂಶಗಳು ಹೇಳಿವೆ. ಜೊತೆಗೆ ಇದು ಕಳೆದ ವರ್ಷಕ್ಕಿಂತ ಹೆಚ್ಚಿದೆ.